96 ಗಂಟೆಗಳ ನಂತರ ನಾನು ವಿವರಗಳನ್ನು ಯಾವ ರೀತಿ ಸರಿಪಡಿಸಿಕೊಳ್ಳಬಹುದು?keyboard_arrow_down
ನೀವು 96 ಗಂಟೆಗಳ ಅವಧಿಯ ಒಳಗೆ ನಿಮ್ಮ ವಿವರಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗದಿದ್ದಲ್ಲಿ, ನಿಮ್ಮ ಆಧಾರ್ ಅನ್ನು ತಂತ್ರಾಂಶ ಅನ್ವಯದಿಂದ ಹೊರತೆಗೆದ ನಂತರ ನಿಮ್ಮ ವಿವರಗಳನ್ನು ಇಂದಿನದಿನದನ್ನಾಗಿ ಮಾಡಿಸಿಕೊಳ್ಳಬಹುದು.
ನನ್ನ ಯಾವುದಾದರೂ ಬೆರಳುಗಳು ಅಥವಾ ಕಣ್ಣಿನ ಪಾಪೆಗಳು ಇಲ್ಲವಾದಲ್ಲಿ ನಾನು ಆಧಾರ್ ಗಾಗಿ ನೋಂದಣಿ ಮಾಡಿಸಿಕೊಳ್ಳಬಹುದೆ?keyboard_arrow_down
ಹೌದು, ನಿಮ್ಮ ಯಾವುದಾದರೂ ಅಥವಾ ಎಲ್ಲಾ ಬೆರಳುಗಳೂ/ಕಣ್ಣಿನ ಪಾಪೆಗಳು ಇಲ್ಲವಾದಲ್ಲಿಯೂ ಕೂಡ ಆಧಾರ್ ಗಾಗಿ ನೀವು ನೋಂದಣಿ ಮಾಡಿಸಿಕೊಳ್ಳಬಹುದು. ಅಂತಹ ವಿನಾಯಿತಿಗಳ ನಿರ್ವಹಣೆಗಾಗಿ ಆಧಾರ್ ತಂತ್ರಾಂಶ ಅನ್ವಯವು ಅನುವುಗಳನ್ನು ಹೊಂದಿದೆ.
ಆಧಾರ್ ನೋಂದಣಿಗಾಗಿ ಮೊಬೈಲು ಸಂಖ್ಯೆ ಅಥವಾ ಇ-ಮೈಲ್ ವಿಳಾಸವನ್ನು ನೀಡುವುದು ಕಡ್ಡಾಯವೆ?keyboard_arrow_down
ಇಲ್ಲ. ಆಧಾರ್ ನೋಂದಣಿಗಾಗಿ ಮೊಬೈಲು ಸಂಖ್ಯೆ ಅಥವಾ ಇ-ಮೈಲ್ ವಿಳಾಸವನ್ನು ನೀಡುವುದು ಕಡ್ಡಾಯವಲ್ಲ. ಆದರೆ, ನಿಮ್ಮ ಆಧಾರ್ ಗಾಗಿನ ಅರ್ಜಿಯ ಸ್ಥಿತಿಗತಿಯ ಬಗ್ಗೆ ಇತ್ತೀಚಿನ ಮಾಹಿತಿಯನ್ನು ನೀವು ಪಡೆಯುವ ರೀತಿಯಲ್ಲಿ ಮೊಬೈಲು ಸಂಖ್ಯೆ ಮತ್ತು ಇ-ಮೈಲ್ ವಿಳಾಸವನ್ನು ಒದಗಿಸುವಂತೆ ನಾವು ಯಾವಾಗಲೂ ಶಿಫಾರಸು ಮಾಡುತ್ತೇವೆ.
ಆಧಾರ್ ನೋಂದಣಿಗಾಗಿ ವಯಸ್ಸಿನ ಇತಿಮಿತಿಗಳಿವೆಯೆ?keyboard_arrow_down
ಇಲ್ಲ, ಆಧಾರ್ ನೋಂದಣಿಗಾಗಿ ಯಾವುದೇ ವಯಸ್ಸಿನ ಇತಿಮಿತಿಗಳನ್ನು ವಿವರಿಸಲಾಗಿಲ್ಲ. ಇದೀಗ ತಾನೇ ಹುಟ್ಟಿದ ಶಿಶುವಿಗೆ/ಮಗುವಿಗೆ ಕೂಡ ಆಧಾರ್ ಗಾಗಿ ನೋಂದಣಿಯನ್ನು ಮಾಡಿಸಬಹುದು.
ನನ್ನ ಆಧಾರ್ ಅನ್ನು ತಂತ್ರಾಂಶ ಅನ್ವಯದಿಂದ ಹೊರತೆಗೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?keyboard_arrow_down
ನೋಂದಣಿಯ ದಿನಾಂಕದಿಂದ ಪ್ರಾರಂಭಗೊಂಡು ಆಧಾರ್ ಅನ್ನು ತಂತ್ರಾಂಶ ಅನ್ವಯದಿಂದ ಹೊರತೆಗೆಯಲು 90 ದಿನಗಳವರೆಗೂ ತೆಗೆದುಕೊಳ್ಳುತ್ತದೆ.
ತಂತ್ರಾಂಶ ಅನ್ವಯದಿಂದ ಆಧಾರ್ ಅನ್ನು ಹೊರತೆಗೆಯಲಾಗಿದೆ ಎಂಬುದು ನನಗೆ ಹೇಗೆ ತಿಳಿಯುತ್ತದೆ?keyboard_arrow_down
ತಂತ್ರಾಂಶ ಅನ್ವಯದಿಂದ ಆಧಾರ್ ಅನ್ನು ಹೊರ ತೆಗೆದ ಕೂಡಲೇ, ನೋಂದಾಯಿತ ಮೊಬೈಲು ಸಂಖ್ಯೆಯಲ್ಲಿ ನೀವು ಎಸ್ಎಂಎಸ್ ಸಂದೇಶವನ್ನು ಸ್ವೀಕರಿಸುವಿರಿ. ಆಧಾರ್ ನ ಸ್ಥಿತಿಗತಿಯನ್ನು ನೀವು “ಆಧಾರ್ ನ ಸ್ಥಿತಿಗತಿಯನ್ನು ಪರಿಶೀಲಿಸಿ”
“Check Aadhaar Status” ಮೇಲೆ ಕ್ಲಿಕ್ ಮಾಡಿರಿ ಅಥವಾ
https://resident.uidai.gov.in/check-aadhaar.ಗೆ ಭೇಟಿ ಕೊಡಿರಿ
ತಂತ್ರಾಂಶ ಅನ್ವಯದಿಂದ ಆಧಾರ್ ಅನ್ನು ಹೊರತೆಗೆದನಂತರ ನಾನು ಆಧಾರ್ ಪತ್ರವನ್ನು ಆನ್-ಲೈನ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದೆ?keyboard_arrow_down
ಹೌದು, ನಿಮ್ಮ ಆಧಾರ್ ಅನ್ನು ತಂತ್ರಾಂಶ ಅನ್ವಯದಿಂದ ಹೊರತೆಗೆದನಂತರ, ಯಾವಾಗ ಬೇಕಾದರೂ “ಡೌನ್ ಲೋಡ್ ಆಧಾರ್” “Download Aadhaar” ಮೇಲೆ ಕ್ಲಿಕ್ ಮಾಡುವ ಮೂಲಕ ಇ-ಆಧಾರ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ಆನ್ ಲೈನ್ ಡೌನ್ ಲೋಡ್ ಮಾಡಲಾದ ಆಧಾರ್ ಪತ್ರವು ಮೂಲ ಆಧಾರ್ ಪತ್ರಕ್ಕೆ ಸಮನಾಗಿ ಊರ್ಜಿತತೆಯನ್ನು ಹೊಂದಿರುತ್ತದೆಯೇ?keyboard_arrow_down
ಹೌದು ಆನ್ ಲೈನ್ ಡೌನ್ ಲೋಡ್ ಮಾಡಲಾದ ಆಧಾರ್ ಪತ್ರವು ಮೂಲ ಆಧಾರ್ ಪತ್ರಕ್ಕೆ ಸಮನಾಗಿ ಊರ್ಜಿತತೆಯನ್ನು ಹೊಂದಿರುತ್ತದೆ.
ನಾನು ನನ್ನ ನೋಂದಣಿ ವಿಶಿಷ್ಟ ಗುರುತು ಚೀಟಿ/ಆಧಾರ್ ಪತ್ರವನ್ನು ಕಳೆದುಕೊಂಡಿರುವೆನು, ಅದನ್ನು ಪತ್ತೆಹಚ್ಚಲು ಯಾವುದಾದರೂ ಮಾರ್ಗೋಪಾಯಗಳಿವೆಯೇ?keyboard_arrow_down
ಹೌದು, ನಿಮ್ಮ ಮೊಬೈಲು ಸಂಖ್ಯೆಯನ್ನು ಆಧಾರ್ ನಲ್ಲಿ ನೋಂದಣಿ ಮಾಡಿಸಿದ್ದಲ್ಲಿ, uidai.gov.in website ಅಥವಾ https://resident.uidai.gov.in/lost-uideid. ಜಾಲತಾಣದಲ್ಲಿ ““Retrieve Lost UID/EID” ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ನೋಂದಣಿ ಸಂಖ್ಯೆಯನ್ನು ಕಂಡುಕೊಳ್ಳಬಹುದು. ನೀವು ಪುನರ್-ಪಡೆದುಕೊಳ್ಳಬಯಸಿರುವ ನೋಂದಣಿ ಗುರುತಿನ ಸಂಖ್ಯೆ (ಇಐಡಿ)/ವಿಶಿಷ್ಟ ಗುರುತಿನ ಸಂಖ್ಯೆ (ಯುಐಡಿ)ಯನ್ನು ಆಯ್ಕೆ ಮಾಡಿಕೊಳ್ಳಿರಿ ಮತ್ತು ಆನಂತರ ನಿಮ್ಮ ಹೆಸರು ಮತ್ತು ಮೊಬೈಲು ಸಂಖ್ಯೆಯನ್ನು (ಆಧಾರ್ ನೋಂದಣಿಯ ಸಮಯದಲ್ಲಿ ನೋಂದಣಿ ಮಾಡಿಸಲಾಗಿರುವ ಸಂಖ್ಯೆ) ಊಡಿಕೆ ಮಾಡಿರಿ. ನೀವು ನಿಮ್ಮ ನೋಂದಣಿ ಗುರುತಿನ ಸಂಖ್ಯೆ (ಇಐಡಿ)/ವಿಶಿಷ್ಟ ಗುರುತಿನ ಸಂಖ್ಯೆ (ಯುಐಡಿ)ಯನ್ನು ನಿಮ್ಮ ಇಮೈಲು/ಮೊಬೈಲು ಸಂಖ್ಯೆಯಲ್ಲಿ ಸ್ವೀಕರಿಸುವಿರಿ. ಆಧಾರ್ ನಲ್ಲಿ ನಿಮ್ಮ ಮೊಬೈಲು ಸಂಖ್ಯೆಯನ್ನು ನೋಂದಣಿ ಮಾಡಿಸಿಲ್ಲವಾದಲ್ಲಿ, ನೀವು ನಿಮ್ಮ ಅತೀ ಸಮೀಪದ ಶಾಶ್ವತ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ಕೊಡಬೇಕಾಗುತ್ತದೆ.
ನಾನು ಆಧಾರ್ ಗಾಗಿ ಅನೇಕ ಸಲ ನೋಂದಣಿ ಮಾಡಿಸಿರುವೆನು, ಆದರೆ ನನ್ನ ಆಧಾರ್ ಪತ್ರವನ್ನು ಸ್ವೀಕರಿಸಿರುವುದಿಲ್ಲ. ಈ ನಿಟ್ಟಿನಲ್ಲಿ ನಾನು ಏನು ಮಾಡಬೇಕು?keyboard_arrow_down
ನಿಮ್ಮ ಆಧಾರ್ ಅನ್ನು ತಂತ್ರಾಂಶ ಅನ್ವಯದಿಂದ ಹೊರತೆಗೆದಿರುವ ಆದರೆ ಅಂಚೆಯ ಮೂಲಕ ಆಧಾರ್ ಪತ್ರವನ್ನು ನೀವು ಸ್ವೀಕರಿಸಿರದಿರುವ ಸಂಭವವಿರುತ್ತದೆ. ಆಧಾರ್ ನ ಸ್ಥಿತಿಗತಿಯನ್ನು ನೀವು “ಆಧಾರ್ ನ ಸ್ಥಿತಿಗತಿಯನ್ನು ಪರಿಶೀಲಿಸಿ”
Check Aadhaar Status” ಮೇಲೆ ಕ್ಲಿಕ್ ಮಾಡುವ ಮೂಲಕ ಅಥವಾ
https://resident.uidai.gov.in/check-aadhaarಗೆ ಭೇಟಿ ಕೊಡುವ ಮೂಲಕ ಅಥವಾ ಅತೀ ಸಮೀಪದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ಕೊಡುವ ಮೂಲಕ ನಿಮ್ಮ ಆಧಾರ್ ಸ್ಥಿತಿಗತಿಯನ್ನು ಪರಿಶೀಲಿಸಿರಿ ಎಂಬುದಾಗಿ ನಾವು ಈ ಮೂಲಕ ಶಿಫಾರಸು ಮಾಡುತ್ತಿದ್ದೇವೆ.
ನನ್ನ ಆಧಾರ್ ಅನ್ನು ತಿರಸ್ಕರಿಸಲಾಗಿದೆ ಎಂಬುದಾಗಿ ನನ್ನ ಮೊಬೈಲಿನಲ್ಲಿ ಎಸ್ಎಂಎಸ್ ಸಂದೇಶವನ್ನು ಸ್ವೀಕರಿಸಿರುವೆನು, ಈ ನಿಟ್ಟಿನಲ್ಲಿ ನಾನು ಏನು ಮಾಡಬೇಕು?keyboard_arrow_down
ತಂತ್ರಾಂಶ ಅನ್ವಯದಿಂದ ಆಧಾರ್ ಅನ್ನು ಹೊರತೆಗೆಯುವುದು ವಿವಿಧ ಗುಣಮಟ್ಟದ ಪರೀಕ್ಷಣೆಗಳನ್ನು ಒಳಗೊಂಡಿರುತ್ತದೆ, ಆದ್ದರಿಂದ ಗುಣಮಟ್ಟ ಅಥವಾ ಇತರೆ ತಾಂತ್ರಿಕ ಕಾರಣಗಳಿಂದ ನಿಮ್ಮ ಆಧಾರ್ ತಿರಸ್ಕೃತಗೊಂಡಿರುವ ಸಂಭಾವ್ಯತೆಯಿರುತ್ತದೆ. ನಿಮ್ಮ ಆಧಾರ್ ತಿರಸ್ಕೃತಗೊಂಡಿದೆ ಎಂಬುದಾಗಿ ನೀವು ಎಸ್ಎಂಎಸ್ ಸಂದೇಶವನ್ನು ಸ್ವೀಕರಿಸಿದ್ದಲ್ಲಿ, ನೀವು ಪುನ: ನೋಂದಣಿಯನ್ನು ಮಾಡಿಸಬೇಕಾಗಿ ಈ ಮೂಲಕ ಶಿಫಾರಸು ಮಾಡಲಾಗುತ್ತಿದೆ.
ಆಧಾರ್ ನೋಂದಣಿಗಾಗಿ ಅಗತ್ಯವಿರುವ ದಾಖಲೆಗಳನ್ನು ನಾನು ಹೊಂದಿರುವುದಿಲ್ಲ, ಆದಾಗ್ಯೂ ನಾನು ನೋಂದಣಿ ಮಾಡಿಸಬಹುದೆ?keyboard_arrow_down
ಹೌದು, ಒಂದು ಕುಟುಂಬದಲ್ಲಿ ಯಾರಾದರೂ ಅಗತ್ಯ ದಾಖಲೆಗಳನ್ನು ಹೊಂದಿಲ್ಲವಾದಲ್ಲಿ, ಹಾಗಿದ್ದೂ ನಿವಾಸಿಯು ಆತನ/ಆಕೆಯ ಹೆಸರು ಕುಟುಂಬದ ಅರ್ಹತೆಯ ದಾಖಲೆಯಲ್ಲಿ ಇದ್ದಲ್ಲಿ ನಿವಾಸಿಯು ನೋಂದಣಿ ಮಾಡಿಸಿಕೊಳ್ಳಬಹುದು. ಇಂತಹ ಪ್ರಕರಣದಲ್ಲಿ, ಅರ್ಹತೆಯ ದಾಖಲೆಯಲ್ಲಿನ ಕುಟುಂಬದ ಮುಖ್ಯಸ್ಥರು ಊರ್ಜಿತ ಗುರುತಿನ ಸಾಕ್ಷಾಧಾರ ಮತ್ತು ವಿಳಾಸದ ಸಾಕ್ಷಾಧಾರಗಳೊಂದಿಗೆ ಮೊದಲು ನೋಂದಣಿ ಮಾಡಿಸಿಕೊಳ್ಳತಕ್ಕದ್ದು ಮತ್ತು ತದನಂತರ ಕುಟುಂಬದ ಮುಖ್ಯಸ್ಥರ ಗುರುತಿನ ಸಾಕ್ಷಾಧಾರ ಮತ್ತು ವಿಳಾಸದ ಸಾಕ್ಷಾಧಾರಗಳ ಆಧಾರದ ಮೇರೆಗೆ ಕುಟುಂಬದ ಇತರೆ ಸದಸ್ಯರು ನೋಂದಣಿ ಮಾಡಿಸಿಕೊಳ್ಳತಕ್ಕದ್ದು. ಭಾವಿಗುಪ್ರಾವು ಸಂಬಂಧದ ಸಾಕ್ಷಾಧಾರವನ್ನಾಗಿ 8 ದಾಖಲೆ ಮಾದರಿಗಳನ್ನು ಒಪ್ಪಿಕೊಳ್ಳುತ್ತದೆ. ರಾಷ್ಟ್ರೀಯವಾಗಿ ಊರ್ಜಿತವಾಗಿರುವ ದಾಖಲೆಗಳ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ.
ಆತನ/ಆಕೆಯ ನೋಂದಣಿಯು ತಿರಸ್ಕೃತಗೊಳ್ಳುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವಲ್ಲಿ ನಿವಾಸಿಯ ಜವಾಬ್ದಾರಿಗಳು ಯಾವುವು?keyboard_arrow_down
ನಿವಾಸಿಯು ಆತನ/ಆಕೆಯ ವಿವರಗಳನ್ನು ಆಂಗ್ಲ ಭಾಷೆಯಲ್ಲಿ ಮಾತ್ರವಲ್ಲದೆಯೇ ಸ್ಥಳೀಯ ಭಾಷೆಯಲ್ಲಿ ಆತನ/ಆಕೆಯ ಎದುರು ಲಭ್ಯವಿರುವ ಗಣಕಯಂತ್ರ ಪರದೆಯ ಮೇಲೆ ಗಮನಿಸುವ ಮೂಲಕ ಸಮೀಕ್ಷಿಸತಕ್ಕದ್ದು. ಹೆಸರು, ಲಿಂಗ, ಹುಟ್ಟಿದ ದಿನಾಂಕ, ವಿಳಾಸ, ಇತ್ಯಾದಿಗಳು ಸರಿಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು. ಮಿ. ಮಿಸೆಸ್/ಕರ್ನಲ್/ಡಾ. ಇತ್ಯಾದಿ ಪದವಿಸೂಚಕ/ಅಧಿಕಾರ ಸೂಚಕಗಳನ್ನು ಹೆಸರಿನ ಮುಂದೆ ಅಥವಾ ಹಿಂದೆ ಸೇರಿಸಲಾಗಿದೆ ಎಂಬುದನ್ನೂ ಸಹ ಖಚಿತಪಡಿಸಿಕೊಳ್ಳತಕ್ಕದ್ದು. ಉಪನಾಮದ ಮೊದಲ ಅಕ್ಷರಗಳನ್ನು ಮಾತ್ರ ನೀಡುವ ಬದಲು ಸಂಪೂರ್ಣ ಹೆಸರನ್ನು ನೀಡತಕ್ಕದ್ದು, ಉದಾಹರಣೆಗೆ ಬಿ.ಕೆ. ಶರ್ಮ ಎಂಬುದನ್ನು ಬ್ರಿಜ್ ಕುಮಾರ್ ಶರ್ಮ ಎಂಬುದಾಗಿ ಬರೆಯತಕ್ಕದ್ದು. ನಿರ್ವಾಹಕರು ಸೆರೆ ಹಿಡಿದ ಛಾಯಾಚಿತ್ರವು ಸರಿಯಾಗಿದೆ ಮತ್ತು ಗುರುತಿಸಬಹುದಾಗಿದೆ ಎಂಬುದನ್ನು ಸಮೀಕ್ಷಿಸತಕ್ಕದ್ದು.
ಅವರುಗಳು ಪ್ರತ್ಯೇಕ ಗುರುತಿನ ಸಾಕ್ಷಾಧಾರಗಳನ್ನು ಅಥವಾ ವಿಳಾಸದ ಸಾಕ್ಷಾಧಾರಗಳನ್ನು ಹೊಂದಿಲ್ಲವಾದಲ್ಲಿ ದಾಖಲೆಯಲ್ಲಿ ಪಟ್ಟಿ ಮಾಡಲಾಗಿರುವ ಕುಟುಂಬದ ಸದಸ್ಯರಿಗೆ ಪಡಿತರ ಚೀಟಿ, ರಾಉಖಾ ಅಧಿನಿಯಮದ ಕಾರ್ಡು, ಇತ್ಯಾದಿಗಳನ್ನು ಗುರುತು/ವಿಳಾಸದ ಒಂದು ಊರkeyboard_arrow_down
ಹೌದು, ದಾಖಲೆಗಳಲ್ಲಿ ಕಂಡುಬರುವ ಛಾಯಾಚಿತ್ರದ ಕುಟುಂಬದ ಮುಖ್ಯಸ್ತರು ಹಾಜರಿದ್ದು ಮತ್ತು ಕುಟುಂಬದ ಸದಸ್ಯರ ಗುರುತು ಮತ್ತು ವಿಳಾಸವನ್ನು ಪರಿಶೀಲಿಸುವರೋ ಮತ್ತು ನೋಂದಣಿ ಅಧಿಕಾರಿಯವರು/ರಿಜಿಸ್ಟ್ರಾರ್ ರವರು ಅನುಮತಿ ನೀಡಿರುವ ಪರಿಚಯವನ್ನು ಮಾಡುವವರು ದಾಖಲೆಯ ಪ್ರತಿಯ ಮೇಲೆ ಸ್ವೀಕೃತಿಯ ಸಾಕ್ಷಾಧಾರ ಎಂಬುದಾಗಿ ಮೇಲು ಋಜು ಮಾಡುವರೋ ಅಲ್ಲಿಯವರೆಗೆ ಕುಟುಂಬ ಅರ್ಹತೆ ದಾಖಲೆಗಳನ್ನು ಗುರುತಿನ/ವಿಳಾಸದ ಸಾಕ್ಷಾಧಾರವನ್ನಾಗಿ ಒಪ್ಪಿಕೊಳ್ಳಲಾಗುವುದು.
ಕುಟುಂಬದ ನೋಂದಣಿಗಳಿಗಾಗಿ ಅನುಸರಿಸಬೇಕಾದ ಪ್ರಕ್ರಿಯೆಗಳನ್ನು ಭಾವಿಗುಪ್ರಾವು ವಿವರಿಸಿದೆಯೆ?keyboard_arrow_down
ಹೌದು, ಕುಟುಂಬದ ಮುಖ್ಯಸ್ಥರು ತಪ್ಪದೇ ಗುರುತಿನ ಸಾಕ್ಷಾಧಾರ/ವಿಳಾಸದ ಸಾಕ್ಷಾಧಾರಗಳನ್ನು ಪರಿಶೀಲನೆಗಾಗಿ ತರತಕ್ಕದ್ದು ಮತ್ತು ಕುಟುಂಬದ ಅರ್ಹತೆಯ ದಾಖಲೆಯ ಆಧಾರದ ಮೇರೆಗೆ ಮಾತ್ರ ಅದರಲ್ಲಿ ದಾಖಲಿಸಲಾಗಿರುವ ಹೆಸರುಗಳು ಮತ್ತು ಇತರೆ ವಿವರಗಳನ್ನು ಆಧರಿಸಿ ನೋಂದಣಿಯನ್ನು ಮಾಡಬಹುದು. ಕುಟುಂಬದ ನೋಂದಣಿಗಾಗಿ, ಕುಟುಂಬದ ಸದಸ್ಯರು ಸಾದ್ಯವಾದಷ್ಟು ಮಟ್ಟಿಗೆ ಒಟ್ಟಾಗಿ ಬರುವುದು ಅಪೇಕ್ಷಣೀಯ. ಒಂದು ವೇಳೆ ಎಲ್ಲಾ ಸದಸ್ಯರು ಒಂದೇ ದಿನ ಒಟ್ಟಾಗಿ ಬರಲು ಸಾಧ್ಯವಾಗದಿದ್ದಲ್ಲಿ ಕುಟುಂಬದ ಮುಖ್ಯಸ್ಥರು ಕುಟುಂಬದ ಸದಸ್ಯರ ಪೈಕಿ ಆತನು/ಆಕೆಯು ಬಂದಾಗಲೆಲ್ಲಾ ಅವರ ಜೊತೆಗೆ ಬರತಕ್ಕದ್ದು.
ವಿಳಾಸದ ಸಾಕ್ಷಾಧಾರದಲ್ಲಿ ಸೂಚಿಸಲಾಗಿರುವ ವಿಳಾಸವು ಅಂಚೆ ವಿತರಣೆಗೆ ಅಸಮರ್ಪಕವೆಂಬುದಾಗಿ ಕಂಡುಬಂದಲ್ಲಿ ಇರುವ ಆಯ್ಕೆ ಯಾವುದು? ನಿವಾಸಿಗಳಿಂದ ಹೆಚ್ಚುವರಿ ಮಾಹಿತಿಯನ್ನು ಒಪ್ಪಿಕೊಳ್ಳಬಹುದೆ?keyboard_arrow_down
ಹೌದು, ಮನೆ ಸಂಖ್ಯೆ, ಮಾರ್ಗದ ಸಂಖ್ಯೆ ಬೀದಿಯ ಹೆಸರು, ಬೆರಳಚ್ಚಿನ ತಪ್ಪುಗಳನ್ನು ಸರಿಪಡಿಸುವುದು, ಅಪ್ರಧಾನ ಬದಲಾವಣೆಗಳು, ಪಿನ್ ಕೋಡಿಗೆ ತಿದ್ದುಪಡಿ, ಇತ್ಯಾದಿ ಅಪ್ರಧಾನ ಕ್ಷೇತ್ರಗಳನ್ನು ವಿಳಾಸದ ಸಾಕ್ಷಾಧಾರದಲ್ಲಿನ ವಿಳಾಸಕ್ಕೆ ಸೇರಿಸಲು, ಈ ಸೇರ್ಪಡೆಗಳು/ಮಾರ್ಪಾಡುಗಳು ವಿಳಾಸದ ಸಾಕ್ಷಾಧಾರದಲ್ಲಿ ನಮೂದಿಸಲಾಗಿರುವ ಮೂಲ ವಿಳಾಸವನ್ನು ಬದಲಾಯಿಸದವರೆಗೆ ನಿವಾಸಿಗೆ ಅನುವು ಮಾಡಿಕೊಡಬಹುದು. ಕೋರಲಾಗಿರುವ ಬದಲಾವಣೆಗಳು ಗಮನಾರ್ಹವಾಗಿದ್ದಲ್ಲಿ ಮತ್ತು ವಿಳಾಸದ ಸಾಕ್ಷಾಧಾರದಲ್ಲಿ ಪಟ್ಟಿ ಮಾಡಲಾಗಿರುವ ಮೂಲ ವಿಳಾಸವನ್ನು ಬದಲಾಯಿಸಿದಲ್ಲಿ, ನಿವಾಸಿಯು ಬದಲಿ ವಿಳಾಸದ ಸಾಕ್ಷಾಧಾರವನ್ನು ಒದಗಿಸುವ ಅಥವಾ ಪರಿಚಯಿಸುವವರ ಮೂಲಕ ನೋಂದಣಿ ಮಾಡಿಸುವ ಅಗತ್ಯತೆಯಿರುತ್ತದೆ.
ಓರ್ವ ನಿವಾಸಿಗೆ ವಿವಿಧ ವಿಳಾಸ ಸಾಕ್ಷಾಧಾರಗಳು ಲಭ್ಯವಿದ್ದಲ್ಲಿ (ಉದಾಹರಣೆಗೆ ಹಾಲಿ/ಪ್ರಸಕ್ತ ಮತ್ತು ಹುಟ್ಟಿದ ಊರು), ಯಾವ ಸಾಕ್ಷಾಧಾರವನ್ನು ಭಾವಿಗುಪ್ರಾವು ಒಪ್ಪಿಕೊಳ್ಳುತ್ತದೆ ಮತ್ತು ಅದು ಯಾವ ವಿಳಾಸಕ್ಕೆ ಆಧಾರ್ ಪತ್ರವನ್ನು ಕಳುಹಿಸುತ್ತದೆ?keyboard_arrow_down
ಆಧಾರ್ ಪತ್ರವನ್ನು ಯಾವ ವಿಳಾಸಕ್ಕೆ ಕಳುಹಿಸಲು ಆತನು/ಆಕೆಯು ಇಚ್ಚಿಸುತ್ತಾರೆ ಎಂಬುದನ್ನು ಖಚಿತಪಡಿಸುವಂತೆ ಭಾವಿಗುಪ್ರಾವು ನಿವಾಸಿಯನ್ನು ಕೋರುವುದು. ನಿವಾಸಿಯ ಆಯ್ಕೆಯಂತೆ, ಭಾವಿಗುಪ್ರಾವು ಬೆಂಬಲಿತ ದಾಖಲೆಗಳ ಅನುಸಾರ ವಿವರಗಳನ್ನು ಸೆರೆಹಿಡಿಯುವುದು.
ಡೇಟಾಬೇಸ್ ಅನ್ನು ಯಾವ ಭಾಷೆಯಲ್ಲಿ ನಿರ್ವಹಿಸಲಾಗುತ್ತದೆ? ಯಾವ ಭಾಷೆಯಲ್ಲಿ ದೃಢೀಕರಣ ಸೇವೆಗಳನ್ನು ಒದಗಿಸಲಾಗುತ್ತದೆ? UIDAI ಮತ್ತು ನಿವಾಸಿಗಳ ನಡುವೆ ಯಾವ ಭಾಷೆಯಲ್ಲಿ ಸಂವಹನ ನಡೆಯುತ್ತದೆ?keyboard_arrow_down
ಡೇಟಾಬೇಸ್ ಅನ್ನು ಇಂಗ್ಲಿಷ್ನಲ್ಲಿ ನಿರ್ವಹಿಸಲಾಗುತ್ತದೆ. ನಿವಾಸಿ ಮತ್ತು UIDAI ನಡುವಿನ ಸಂವಹನವು ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಯಲ್ಲಿರುತ್ತದೆ.
ನಾನು ನೋಂದಣಿ-ಪೂರ್ವ ಮಾಹಿತಿಯನ್ನು ಸ್ಥಳೀಯ ಭಾಷೆಯಲ್ಲಿ ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು?keyboard_arrow_down
ಈ ಸಮಯದಲ್ಲಿ ನೋಂದಣಿ-ಪೂರ್ವ ಮಾಹಿತಿಯನ್ನು ಆಂಗ್ಲ ಭಾಷೆಯಲ್ಲಿ ಪಡೆದುಕೊಳ್ಳಲು ಅನುವು ಮಾಡಲಾಗಿದೆ. ನೋಂದಣಿ ಪ್ರಕ್ರಿಯೆಯ ಸಮಯದಲ್ಲಿ, ಮಾಹಿತಿಯನ್ನು ಆಂಗ್ಲ ಭಾಷೆಯಿಂದ ಸ್ಥಳೀಯ ಭಾಷೆಗೆ ಲಿಪ್ಯಂತರಣ ಸಾಧನದಿಂದ ಪರಿವರ್ತಿಸಲಾಗುವುದು. ನಿರ್ವಾಹಕರು ಈ ಮಾಹಿತಿಯನ್ನು ನಿವಾಸಿಯ ಉಪಸ್ಥಿತಿಯಲ್ಲಿ ತಿದ್ದುಪಡಿ ಮಾಡಬಹುದು. ನೋಂದಣಿ-ಪೂರ್ವ ಮಾಹಿತಿಯನ್ನು ಆಂಗ್ಲ ಭಾಷೆಯಲ್ಲಿ ಪಡೆದುಕೊಳ್ಳುವ ರೀತಿಯಲ್ಲಿ ತಂತ್ರಾಂಶ ಅನ್ವಯವನ್ನು ಯೋಜಿಸಲಾಗಿದೆ, ಸ್ಥಳೀಯ ಭಾಷೆ ಅಥವಾ ಎರಡೂ ಭಾಷೆಗಳು ಮುಂದಿನ ಅವತರಣಿಕೆಯಲ್ಲಿರುತ್ತವೆ.
ಸ್ಥಳೀಯ ಭಾಷೆಯಲ್ಲಿ ಪಡೆದುಕೊಳ್ಳಲಾದ ನೋಂದಣಿ-ಪೂರ್ವ ಮಾಹಿತಿಗೆ, ಲಿಪ್ಯಂತರಣ ಸಾಧನದಿಂದ ಅದನ್ನು ರದ್ದುಗೊಳಿಸಲಾಗುವುದಿಲ್ಲ. ಆದಾಗ್ಯೂ, ಮಾಹಿತಿಯನ್ನು ಪರಿಷ್ಕರಿಸುವುದಕ್ಕಾಗಿ ಒಂದು ಸರಾಗವಾಗಿ ನಿರ್ವಹಿಸಬಹುದಾದ Key Pad/IME ಲಭ್ಯವಿರುತ್ತದೆ.
ಭಾರತೀಯ ಭಾಷಾ ಇನ್ಪುಟ್ನಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಗಳು ಯಾವುವು?keyboard_arrow_down
UIDAI ನೋಡಿದ ಅತ್ಯಂತ ಸಾಮಾನ್ಯ ಸಮಸ್ಯೆಯೆಂದರೆ IME ಸ್ಥಾಪನೆ ಮತ್ತು ಇದು ಭಾಷಾ ಪಟ್ಟಿಯೊಂದಿಗಿನ ಪರಸ್ಪರ ಕ್ರಿಯೆಗಳು. ಇದಲ್ಲದೆ, ಸ್ಥಳೀಯ ಭಾಷೆಯ ಕೀಬೋರ್ಡ್ ಅನ್ನು ಊಹಿಸಲು ವಿಂಡೋಸ್ ಭಾಷೆಯ ಇನ್ಪುಟ್ ಅನ್ನು ಕಾನ್ಫಿಗರ್ ಮಾಡಲು ಸಾಧ್ಯವಿದೆ. ಇದು ಲಿಪ್ಯಂತರದಂತೆಯೇ ಅಲ್ಲ, ಆದರೆ ಬೇರೆ ಕೀಬೋರ್ಡ್ ಅನ್ನು ಬಳಸಲಾಗುತ್ತಿದೆ ಎಂದು ಊಹಿಸುತ್ತದೆ - ಮತ್ತು ಫಲಿತಾಂಶಗಳು ತುಂಬಾ ವಿಭಿನ್ನವಾಗಿವೆ. ಯುಐಡಿಎಐ ಇಂಗ್ಲಿಷ್ ಪದಗಳನ್ನು ಸ್ಥಳೀಯ ಭಾಷೆಗೆ ನೈಜವಾಗಿ ಲಿಪ್ಯಂತರ ಮಾಡುವಲ್ಲಿ ಕಷ್ಟವನ್ನು ಹೊಂದಿದೆ, ಏಕೆಂದರೆ ಅವು ಭಾಷಾ ಮಾದರಿಗಿಂತ ಬಹಳ ಭಿನ್ನವಾಗಿವೆ.
IME ಗಳಲ್ಲಿ ಸುಧಾರಿತ ಸೌಲಭ್ಯಗಳನ್ನು ಬಳಸುವುದರ ಮೂಲಕ ಇದನ್ನು ಉತ್ತಮವಾಗಿ ನಿರ್ವಹಿಸಬಹುದು (ಉದಾ. Google IME ನಲ್ಲಿನ ಯೋಜನೆಗಳು) ಭಾಷಾ ಬೆಂಬಲವನ್ನು ಪ್ರತಿ ಬಳಕೆದಾರರ ಆಧಾರದ ಮೇಲೆ ಕಾನ್ಫಿಗರ್ ಮಾಡಬೇಕು ಮತ್ತು ಅದು ನಿರ್ವಹಿಸುವುದನ್ನು ಕಷ್ಟಕರವಾಗಿಸುತ್ತದೆ."
ಡೇಟಾ ಎಂಟ್ರಿಗಾಗಿ ನಾನು ಸ್ಥಳೀಯ ಭಾಷೆಯನ್ನು ಪ್ರಾಥಮಿಕ ಮೂಲವನ್ನಾಗಿ ಮಾಡುವುದು ಹೇಗೆ?keyboard_arrow_down
ಈ ಸಮಯದಲ್ಲಿ, ಡೇಟಾ ಪ್ರವೇಶಕ್ಕೆ ಪ್ರಾಥಮಿಕ ಮೂಲವು ಇಂಗ್ಲಿಷ್ನಲ್ಲಿದೆ. ಆದಾಗ್ಯೂ, ತಂತ್ರಜ್ಞಾನವು ಬೆಳೆದಂತೆ, ರಿವರ್ಸ್ ಲಿಪ್ಯಂತರಣವನ್ನು ಆಧರಿಸಿ ಪ್ರಾಥಮಿಕ ಭಾಷೆಯನ್ನು ಸ್ಥಳೀಯ ಭಾಷೆಗೆ ಬದಲಾಯಿಸಲು ನಾವು ನಿರೀಕ್ಷಿಸುತ್ತೇವೆ. ಇದು ಇನ್ನೂ ಲಭ್ಯವಿಲ್ಲದ ತಂತ್ರಜ್ಞಾನದ ಮೇಲೆ ಅವಲಂಬನೆಯಾಗಿರುವುದರಿಂದ, ನಾವು ದಿನಾಂಕವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ, ಆದರೆ - ನಾವು ಆವೃತ್ತಿ 3.0 ನಲ್ಲಿ ಬಿಡುಗಡೆಯನ್ನು ಗುರಿಯಾಗಿಸಿಕೊಂಡಿದ್ದೇವೆ."
ಯಾವ ಯಾವ ಭಾಷೆಗಳನ್ನು ಬೆಂಬಲಿಸಲಾಗುತ್ತದೆ?keyboard_arrow_down
ಪ್ರಸ್ತುತ ಆಧಾರ್ ಪತ್ರಗಳನ್ನು ಈ ಕೆಳಗಿನ 13 ಭಾಷೆಗಳಲ್ಲಿ ಮುದ್ರಿಸಲಾಗುತ್ತಿದೆ:
ಹಿಂದಿ
ಇಂಗ್ಲಿಷ್,
ಉರ್ದು
ಅಸ್ಸಾಮಿ,
ಬೆಂಗಾಲಿ,
ಗುಜರಾತಿ,
ಕನ್ನಡ,
ಮಲಯಾಳಂ,
ಮರಾಠಿ,
ಒಡಿಯಾ,
ಪಂಜಾಬಿ,
ತಮಿಳು,
ತೆಲುಗು, .
ನಿರ್ದಿಷ್ಟ ಭಾಷೆಗೆ ಬೆಂಬಲವಿದೆ ಎಂದು ನೀವು ಹೇಳಿದಾಗ ನಿಮ್ಮ ಅರ್ಥವೇನು?keyboard_arrow_down
ಸ್ಥಳೀಯ ಭಾಷೆಯನ್ನು ಬೆಂಬಲಿಸುವುದು ಇದಕ್ಕೆ ಬೆಂಬಲವನ್ನು ಒದಗಿಸುವುದನ್ನು ಸೂಚಿಸುತ್ತದೆ:
- ಸ್ಥಳೀಯ ಭಾಷೆಯಲ್ಲಿ ಡೇಟಾ ನಮೂದು
- ಸ್ಥಳೀಯ ಭಾಷೆಗೆ ಇಂಗ್ಲೀಷ್ ಭಾಷೆಯ ಡೇಟಾ ಲಿಪ್ಯಂತರ
- ಸಾಫ್ಟ್ವೇರ್ನಲ್ಲಿ ಸ್ಥಳೀಯ ಭಾಷೆಯಲ್ಲಿ ಲೇಬಲ್ಗಳು (ಪರದೆಯ ಮೇಲೆ)
- ಮುದ್ರಣ ರಸೀದಿಯಲ್ಲಿ ಸ್ಥಳೀಯ ಭಾಷೆಯಲ್ಲಿ ಲೇಬಲ್ಗಳು
- ಸ್ಥಳೀಯ ಭಾಷೆಯಲ್ಲಿ ಪೂರ್ವ ದಾಖಲಾತಿ ಡೇಟಾದ ಆಮದು (ಮುಂಬರಲಿದೆ)"
ನಾನು ಮಾಹಿತಿಯನ್ನು ಸ್ಥಳೀಯ ಭಾಷೆಯಲ್ಲಿ ಯಾವ ರೀತಿಯಲ್ಲಿ ಊಡಿಕೆ ಮಾಡಬಹುದು?keyboard_arrow_down
ದಾಖಲಾತಿ ಕ್ಲೈಂಟನ್ನು ಸ್ಥಾಪಿಸುವ ಸಮಯದಲ್ಲಿ ಒಂದು ಸ್ಥಳೀಯ ಭಾಷೆಯನ್ನು ಆಯ್ಕೆ ಮಾಡಬಹುದು. ಲಭ್ಯವಿರುವ ಆಯ್ಕೆಗಳ ಪಟ್ಟಿಯು ದಾಖಲಾತಿ ಕೇಂದ್ರದಲ್ಲಿ ಸ್ಥಾಪಿಸಲಾದ ಇನ್ಪುಟ್ ಮೆಥಡ್ ಎಡಿಟರ್ಗಳ Input Method Editors (IMEs) ಉಪವಿಭಾಗವಾಗಿದೆ. ಉದಾಹರಣೆಗೆ, ಹಿಂದಿ ಇನ್ಪುಟ್ಗಾಗಿ ಆಪರೇಟರ್ Google IME (ಅಥವಾ ಬೇರೆ ಮೂಲದಿಂದ ಲಭ್ಯವಿರುವ IME) ಅನ್ನು ಸ್ಥಾಪಿಸಬಹುದು. ಡೇಟಾ ನಮೂದನ್ನು ಇಂಗ್ಲಿಷ್ನಲ್ಲಿ ನಿರ್ವಹಿಸಿದಾಗ, ಪಠ್ಯವನ್ನು IME ಮೂಲಕ ಲಿಪ್ಯಂತರಗೊಳಿಸಲಾಗುತ್ತದೆ ಮತ್ತು ಪರದೆಯ ಮೇಲೆ ಇರಿಸಲಾಗುತ್ತದೆ. ಆಪರೇಟರ್ ನಂತರ ಈ ಪಠ್ಯವನ್ನು ಸರಿಪಡಿಸಬಹುದು, ವರ್ಚುವಲ್ ಕೀಬೋರ್ಡ್ ಸೇರಿದಂತೆ IME ನಿರ್ಮಿಸಿದ ಎಡಿಟಿಂಗ್ ಪರಿಕರಗಳನ್ನು ಬಳಸಿ. ಕೆಲವು IMEಗಳು ಬಳಕೆದಾರರಿಗೆ ಮ್ಯಾಕ್ರೋಗಳ ಗುಂಪನ್ನು ನಿರ್ದಿಷ್ಟಪಡಿಸಲು ಅವಕಾಶ ನೀಡುತ್ತವೆ ಮತ್ತು ಸ್ಥಳೀಯ ಭಾಷೆಯಲ್ಲಿ ಸುಲಭವಾಗಿ ಡೇಟಾ ಪ್ರವೇಶವನ್ನು ಅನುಮತಿಸಲು ಇತರ ಸ್ಮಾರ್ಟ್ ಉಪಕರಣಗಳು."
ಡೇಟಾಬೇಸ್ನಲ್ಲಿ ಮಕ್ಕಳನ್ನು ಹೇಗೆ ಸೆರೆಹಿಡಿಯಲಾಗುತ್ತದೆ?keyboard_arrow_down
5 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಬಯೋಮೆಟ್ರಿಕ್ಗಳನ್ನು ಸೆರೆಹಿಡಿಯಲಾಗುವುದಿಲ್ಲ. ಅವರ UID ಯನ್ನು ಜನಸಂಖ್ಯಾ ಮಾಹಿತಿ ಮತ್ತು ಅವರ ಪೋಷಕರ UID ಯೊಂದಿಗೆ ಲಿಂಕ್ ಮಾಡಲಾದ ಮುಖದ ಛಾಯಾಚಿತ್ರದ ಆಧಾರದ ಮೇಲೆ ಪ್ರಕ್ರಿಯೆಗೊಳಿಸಲಾಗುತ್ತದೆ. ಈ ಮಕ್ಕಳು ತಮ್ಮ ಹತ್ತು ಬೆರಳುಗಳ ಬಯೋಮೆಟ್ರಿಕ್ಸ್, ಐರಿಸ್ ಮತ್ತು ಮುಖದ ಛಾಯಾಚಿತ್ರವನ್ನು ಅಪ್ಡೇಟ್ ಮಾಡಬೇಕಾಗುತ್ತದೆ, ಅವರು 5 ಮತ್ತು 15 ವರ್ಷಕ್ಕೆ ಕಾಲಿಟ್ಟಾಗ. ಈ ಪರಿಣಾಮದ ಸೂಚನೆಯನ್ನು ಮೂಲ ಆಧಾರ್ ಪತ್ರದಲ್ಲಿ ಉಲ್ಲೇಖಿಸಲಾಗುತ್ತದೆ.
ವಿಕಲಚೇತನರು ಮತ್ತು ಬೆರಳಚ್ಚುಗಳಿಲ್ಲದ ಅಥವಾ ಒರಟಾದ ಕೈಗಳಿಲ್ಲದ ಜನರ ಬಯೋಮೆಟ್ರಿಕ್ ಅನ್ನು ಹೇಗೆ ಸೆರೆಹಿಡಿಯಲಾಗುತ್ತದೆ ಉದಾ. ಬೀಡಿ ಕಾರ್ಮಿಕರು ಅಥವಾ ಬೆರಳುಗಳಿಲ್ಲದ ಜನರು?keyboard_arrow_down
keyboard_arrow_up
ನೀತಿಯು ಈ ವಿನಾಯಿತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ ಮತ್ತು ಸೂಚಿಸಲಾದ ಬಯೋಮೆಟ್ರಿಕ್ ಮಾನದಂಡಗಳು ಈ ಗುಂಪುಗಳನ್ನು ಹೊರತುಪಡಿಸುವುದಿಲ್ಲ ಎಂದು ಖಚಿತಪಡಿಸುತ್ತದೆ.
ಕೈಗಳು/ಬೆರಳುಗಳಿಲ್ಲದ ಜನರ ಸಂದರ್ಭದಲ್ಲಿ ಗುರುತಿನ ನಿರ್ಣಯಕ್ಕಾಗಿ ಫೋಟೋವನ್ನು ಮಾತ್ರ ಬಳಸಲಾಗುತ್ತದೆ ಮತ್ತು ಅನನ್ಯತೆಯನ್ನು ನಿರ್ಧರಿಸಲು ಮಾರ್ಕರ್ಗಳು ಇರುತ್ತವೆ.
ನಾನು ನನ್ನ ಆಧಾರ್ನಲ್ಲಿ ಜನ್ಮ ದಿನಾಂಕವನ್ನು ನವೀಕರಿಸಬಹುದೇ?keyboard_arrow_down
ಹೌದು. ನಿಮ್ಮ ಹೆಸರನ್ನು ಹೊಂದಿರುವ ಮಾನ್ಯವಾದ ಜನ್ಮ ದಿನಾಂಕ (DoB) ಪುರಾವೆಯೊಂದಿಗೆ (ಉಲ್ಲೇಖ: https://uidai.gov.in/images/commdoc/valid_documents_list.pdf) ನಿಮ್ಮ ಆಧಾರ್ನಲ್ಲಿ ಹುಟ್ಟಿದ ದಿನಾಂಕವನ್ನು ನೀವು ನವೀಕರಿಸಬಹುದು.
ನಾನು ಈಗಾಗಲೇ ನನ್ನ ಆಧಾರ್ನಲ್ಲಿ ಜನ್ಮ ದಿನಾಂಕವನ್ನು ಒಮ್ಮೆ ನವೀಕರಿಸಿದ್ದೇನೆ. ನಾನು ಅದನ್ನು ಮತ್ತೊಮ್ಮೆ ನವೀಕರಿಸಬಹುದೇ / ಸರಿಪಡಿಸಬಹುದೇ?keyboard_arrow_down
ನಿಮ್ಮ ಆಧಾರ್ನಲ್ಲಿ ನೀವು ಜನ್ಮ ದಿನಾಂಕವನ್ನು (DoB) ಒಮ್ಮೆ ಮಾತ್ರ ನವೀಕರಿಸಬಹುದು. ನೀವು ಮತ್ತೆ DoB ಅನ್ನು ನವೀಕರಿಸುವ ನಿಜವಾದ ಅಗತ್ಯವನ್ನು ಹೊಂದಿದ್ದರೆ, ಕೆಳಗೆ ನೀಡಿರುವಂತೆ ನೀವು ವಿನಾಯಿತಿ ಪ್ರಕ್ರಿಯೆಯನ್ನು ಅನುಸರಿಸಬೇಕು:
ಈ ಪಟ್ಟಿಯ ಪ್ರಕಾರ ನಿಮ್ಮ ಹೆಸರಿನಲ್ಲಿ ಮಾನ್ಯವಾದ ಜನ್ಮ ದಿನಾಂಕ (DoB) ಪುರಾವೆಯೊಂದಿಗೆ ಯಾವುದೇ ಆಧಾರ್ ಕೇಂದ್ರವನ್ನು ಭೇಟಿ ಮಾಡಿ: https://uidai.gov.in/images/commdoc/valid_documents_list.pdf
ಈ ವಿನಂತಿಯನ್ನು ತಿರಸ್ಕರಿಸಿದರೆ, 1947 ಗೆ ಕರೆ ಮಾಡಿ ಅಥವಾ This email address is being protected from spambots. You need JavaScript enabled to view it. ಗೆ ಬರೆಯಿರಿ ಮತ್ತು ನಿಮ್ಮ ಇತ್ತೀಚಿನ ಅಪ್ಡೇಟ್ ವಿನಂತಿ ಸಂಖ್ಯೆ ಮತ್ತು ಸಂಪರ್ಕ ವಿವರಗಳನ್ನು ಹಂಚಿಕೊಳ್ಳುವ ಮೂಲಕ 'ಎಕ್ಸೆಪ್ಶನ್ ಅಪ್ಡೇಟ್'ಗಾಗಿ ವಿನಂತಿಸಿ.
ನಾನು ಇತ್ತೀಚೆಗೆ ನನ್ನ ಜನ್ಮ ದಿನಾಂಕವನ್ನು ನವೀಕರಿಸಿದ್ದೇನೆ, ಆದರೆ ಅದನ್ನು ತಿರಸ್ಕರಿಸಲಾಗಿದೆ. ಈಗ ಏನು ಮಾಡಬೇಕು?keyboard_arrow_down
ನೀವು ಮೊದಲ ಬಾರಿಗೆ ನಿಮ್ಮ ಜನ್ಮ ದಿನಾಂಕವನ್ನು ನವೀಕರಿಸುತ್ತಿದ್ದರೆ, 1947 ಗೆ ಕರೆ ಮಾಡುವ ಮೂಲಕ ನಿಮ್ಮ ವಿನಂತಿಯನ್ನು ತಿರಸ್ಕರಿಸಿದ ಕಾರಣವನ್ನು ನೀವು ಪರಿಶೀಲಿಸಬಹುದು ಮತ್ತು ಅದಕ್ಕೆ ಅನುಗುಣವಾಗಿ ಸರಿಪಡಿಸುವ ಕ್ರಮವನ್ನು ತೆಗೆದುಕೊಳ್ಳಬಹುದು.
ನಾನು ನನ್ನ ವಿವರಗಳನ್ನು ಸಹಾಯ ಕೇಂದ್ರ/ಪ್ರಾದೇಶಿಕ ಕಚೇರಿಗೆ ಕಳುಹಿಸಿದೆ ಆದರೆ ನನ್ನ ವಿನಂತಿಯನ್ನು ತಿರಸ್ಕರಿಸಲಾಗಿದೆ. ಈಗ ಏನು ಮಾಡಬೇಕು?keyboard_arrow_down
ದಯವಿಟ್ಟು ನಿಮ್ಮ ಪ್ರಕರಣಕ್ಕೆ ಅನ್ವಯವಾಗುವ ಹಂತಗಳನ್ನು ಅನುಸರಿಸಿ:
ನೀವು 14.10.2019 ರ ಮೊದಲು ನಿಮ್ಮ ಜನ್ಮ ದಿನಾಂಕವನ್ನು (DoB) ಅಪ್ಡೇಟ್ ಮಾಡಿದ್ದರೆ ಮತ್ತು ಇದು ನಿಮ್ಮ ಮೊದಲ DoB ಅಪ್ಡೇಟ್ ಆಗಿದ್ದರೆ ಮತ್ತು 'ಅನುಮತಿಸಿದ ಮಿತಿಗಿಂತ ಹೆಚ್ಚಿನ ಜನ್ಮ ದಿನಾಂಕ' ಅಥವಾ 'ಹುಟ್ಟಿದ ದಿನಾಂಕವನ್ನು ಈಗಾಗಲೇ ಪರಿಶೀಲಿಸಲಾಗಿದೆ' ಮುಂತಾದ ನಿರಾಕರಣೆ ಕಾರಣಗಳೊಂದಿಗೆ ತಿರಸ್ಕರಿಸಲಾಗಿದೆ, ನಂತರ, ನೀವು ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನಿಮ್ಮ DoB ಅನ್ನು ಮತ್ತೊಮ್ಮೆ ನವೀಕರಿಸಬಹುದು.
ದಯವಿಟ್ಟು ನೀವು ಮಾನ್ಯವಾದ ಡಾಕ್ಯುಮೆಂಟ್ ಅನ್ನು ಸಲ್ಲಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ (ನೋಡಿ: https://uidai.gov.in/images/commdoc/valid_documents_list.pdf) ನಿಮ್ಮ ಹೆಸರು ಮತ್ತು ಸರಿಯಾದ DoB.
ನಿಮ್ಮ ಜನ್ಮ ದಿನಾಂಕದ ವಿನಂತಿಯನ್ನು 14.10.2019 ರ ನಂತರ ಸಲ್ಲಿಸಿದ್ದರೆ ಮತ್ತು ಅದು ನಿಮ್ಮ ಮೊದಲ DoB ಅಪ್ಡೇಟ್ ಆಗಿದ್ದರೆ, ನಂತರ ನೀವು 1947 ಗೆ ಕರೆ ಮಾಡುವ ಮೂಲಕ ನಿಮ್ಮ ವಿನಂತಿಯನ್ನು ತಿರಸ್ಕರಿಸಿದ ಕಾರಣವನ್ನು ಪರಿಶೀಲಿಸಬಹುದು ಮತ್ತು ಅದಕ್ಕೆ ಅನುಗುಣವಾಗಿ ಸರಿಪಡಿಸುವ ಕ್ರಮವನ್ನು ತೆಗೆದುಕೊಳ್ಳಬಹುದು.
ನಿಮ್ಮ ಜನ್ಮದಿನಾಂಕದಲ್ಲಿ ಇದು ಎರಡನೇ ಅಪ್ಡೇಟ್ ಆಗಿದ್ದರೆ, ನಂತರ 1947 ಗೆ ಕರೆ ಮಾಡಿ ಅಥವಾ This email address is being protected from spambots. You need JavaScript enabled to view it. ಗೆ ಬರೆಯಿರಿ ಮತ್ತು ನಿಮ್ಮ ಇತ್ತೀಚಿನ ಅಪ್ಡೇಟ್ ವಿನಂತಿ ಸಂಖ್ಯೆ ಮತ್ತು ಸಂಪರ್ಕ ವಿವರಗಳನ್ನು ಹಂಚಿಕೊಳ್ಳುವ ಮೂಲಕ 'ಎಕ್ಸೆಪ್ಶನ್ ಅಪ್ಡೇಟ್'ಗಾಗಿ ವಿನಂತಿಸಿ."
ಆಧಾರ್ ಸೇವಾ ಕೇಂದ್ರಗಳಿಗೆ ಸೇವಾ ಶುಲ್ಕಗಳು ವಿಭಿನ್ನವಾಗಿವೆಯೇ?keyboard_arrow_down
ಇಲ್ಲ, ದೇಶದ ಎಲ್ಲಾ ಆಧಾರ್ ಸೇವಾ ಕೇಂದ್ರಗಳಲ್ಲಿ ಆಧಾರ್ ಸೇವೆಗಳ ಶುಲ್ಕಗಳು ಒಂದೇ ಆಗಿವೆಯೇ? ಅವುಗಳೆಂದರೆ: ಕ್ರ.ಸಂ. ಸೇವಾ ವೆಚ್ಚ
1. ಆಧಾರ್ ನೋಂದಣಿ - ಉಚಿತ
2. ಕಡ್ಡಾಯ ಬಯೋಮೆಟ್ರಿಕ್ ನವೀಕರಣ - ಉಚಿತ
3. ಜನಸಂಖ್ಯಾ ನವೀಕರಣ (ಯಾವುದೇ ಪ್ರಕಾರ) - ರೂ. 50/- (GST ಒಳಗೊಂಡಂತೆ)
4. ಬಯೋಮೆಟ್ರಿಕ್ ಅಪ್ಡೇಟ್ - ರೂ. 100/- (GST ಒಳಗೊಂಡಂತೆ)
5. A4 ಶೀಟ್ನಲ್ಲಿ ಆಧಾರ್ ಡೌನ್ಲೋಡ್ ಮತ್ತು ಕಲರ್ ಪ್ರಿಂಟ್-ಔಟ್ - ಪ್ರತಿ ಆಧಾರ್ಗೆ ರೂ.30/- (GST ಒಳಗೊಂಡಂತೆ) ನಿವಾಸಿಗಳು ಆಧಾರ್ ನೋಂದಣಿ/ತಿದ್ದುಪಡಿ/ಅಪ್ಡೇಟ್ಗೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ ಎಂಬುದನ್ನು ಗಮನಿಸಬಹುದು ಫಾರ್ಮ್. ಒಂದೇ ನಿದರ್ಶನದಲ್ಲಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ನವೀಕರಣವನ್ನು ಒಂದು ಅಪ್ಡೇಟ್ ಎಂದು ಪರಿಗಣಿಸಲಾಗುತ್ತದೆ. ಈ ಶುಲ್ಕಗಳು ಅನ್ವಯವಾಗುವ ಯಾವುದೇ ತೆರಿಗೆಗಳನ್ನು ಒಳಗೊಂಡಿರುತ್ತವೆ.
UIDAI ವೆಬ್ಸೈಟ್ನಿಂದ ಆನ್ಲೈನ್ ಅಪಾಯಿಂಟ್ಮೆಂಟ್ ಬುಕ್ ಮಾಡುವ ಸಮಯದಲ್ಲಿ ಅಥವಾ ASK ನಲ್ಲಿ ಲಭ್ಯವಿರುವ ‘ಕ್ಯಾಶ್ ಕೌಂಟರ್’ನಲ್ಲಿ ನಿವಾಸಿಗಳು ಆನ್ಲೈನ್ ಪಾವತಿಯನ್ನು ಮಾಡಬಹುದು.
ನಾನು ನನ್ನ ಅಪಾಯಿಂಟ್ಮೆಂಟ್ ಅನ್ನು ಮರುಹೊಂದಿಸಬಹುದೇ / ರದ್ದುಗೊಳಿಸಬಹುದೇ?keyboard_arrow_down
ಹೌದು, ನೀವು ಅಪಾಯಿಂಟ್ಮೆಂಟ್ ಪೋರ್ಟಲ್ಗೆ ಅದೇ ಮೊಬೈಲ್ ಸಂಖ್ಯೆ/ಇಮೇಲ್ ಐಡಿಯೊಂದಿಗೆ ಲಾಗ್ ಇನ್ ಮಾಡುವ ಮೂಲಕ ಅಪಾಯಿಂಟ್ಮೆಂಟ್ ಅನ್ನು ಮರುನಿಗದಿಗೊಳಿಸಬಹುದು (ಹಿಂದೆ ನೀಡಿದ್ದಂತೆ).
ನಾನು ಆಧಾರ್ ಸೇವಾ ಕೇಂದ್ರದಲ್ಲಿ ನನ್ನ ಆಧಾರ್ ಅನ್ನು ನವೀಕರಿಸಬಹುದೇ?keyboard_arrow_down
ಹೌದು, ನಿವಾಸಿಗಳು ಈ ಕೆಳಗಿನ ಸೇವೆಗಳಿಗಾಗಿ ಯಾವುದೇ ಅನುಕೂಲಕರ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಬಹುದು:
1. ಆಧಾರ್ ನೋಂದಣಿ
2. ತಮ್ಮ ಆಧಾರ್ನಲ್ಲಿರುವ ಯಾವುದೇ ಜನಸಂಖ್ಯಾ ಮಾಹಿತಿಯ ನವೀಕರಣ (ಹೆಸರು, ವಿಳಾಸ, ಲಿಂಗ, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ)
3. ನವೀಕರಣ ಅವರ ಆಧಾರ್ನಲ್ಲಿರುವ ಬಯೋಮೆಟ್ರಿಕ್ ಡೇಟಾ (ಫೋಟೋ, ಫಿಂಗರ್ಪ್ರಿಂಟ್ಗಳು ಮತ್ತು ಐರಿಸ್ ಸ್ಕ್ಯಾನ್ಗಳು)
4. ಮಕ್ಕಳ ಕಡ್ಡಾಯ ಬಯೋಮೆಟ್ರಿಕ್ ಅಪ್ಡೇಟ್ (5 ಮತ್ತು 15 ವರ್ಷ ವಯಸ್ಸಿನವರು)
5. ಆಧಾರ್ ಡೌನ್ಲೋಡ್ ಮಾಡಿ ಮತ್ತು ಮುದ್ರಿಸಿ ಈ ಸೇವೆಗಳು ಭಾರತದ ಯಾವುದೇ ನಿವಾಸಿಗಳಿಗೆ ಮತ್ತು ಯಾವುದೇ ಆಧಾರ್ನಲ್ಲಿ NRI ಗಳಿಗೆ ಲಭ್ಯವಿದೆ ದೇಶಾದ್ಯಂತ ಸೇವಾ ಕೇಂದ್ರ.
UIDAI ASK ಗಳ (ಆಧಾರ್ ಸೇವಾ ಕೇಂದ್ರಗಳು) ಸಮಯಗಳು ಯಾವುವು?keyboard_arrow_down
ಆಧಾರ್ ಸೇವಾ ಕೇಂದ್ರಗಳು ರಜಾದಿನಗಳನ್ನು ಹೊರತುಪಡಿಸಿ ವಾರದ ಎಲ್ಲಾ 7 ದಿನಗಳು 9:30 AM ನಿಂದ 5:30 PM (IST) ವರೆಗೆ ತೆರೆದಿರುತ್ತವೆ.
UIDAI ASKಗಳನ್ನು ಹೊರತುಪಡಿಸಿ ಆಧಾರ್ ಕೇಂದ್ರಗಳು ಆಯಾ ರಿಜಿಸ್ಟ್ರಾರ್ಗಳು ವ್ಯಾಖ್ಯಾನಿಸಿದ ಸಮಯವನ್ನು ಅನುಸರಿಸುತ್ತವೆ.
ಹೆಚ್ಚಿನ ಮಾಹಿತಿಗಾಗಿ ನಿವಾಸಿಗಳು ತಮ್ಮ ಹತ್ತಿರದ ಆಧಾರ್ ಕೇಂದ್ರವನ್ನು ಸಂಪರ್ಕಿಸಬಹುದು.
ಆಧಾರ್ ಸೇವಾ ಕೇಂದ್ರ (ASK) ಎಂದರೇನು?keyboard_arrow_down
ಆಧಾರ್ ಸೇವಾ ಕೇಂದ್ರ' ಅಥವಾ ASK ನಿವಾಸಿಗಳಿಗೆ ಎಲ್ಲಾ ಆಧಾರ್ ಸೇವೆಗಳಿಗೆ ಒಂದೇ-ನಿಲುಗಡೆ ತಾಣವಾಗಿದೆ. ASK ಅತ್ಯಾಧುನಿಕ ಪರಿಸರದಲ್ಲಿ ನಿವಾಸಿಗಳಿಗೆ ಮೀಸಲಾದ ಆಧಾರ್ ನೋಂದಣಿ ಮತ್ತು ನವೀಕರಣ ಸೇವೆಗಳನ್ನು ನೀಡುತ್ತದೆ. ಆಧಾರ್ ಸೇವಾ ಕೇಂದ್ರವು ನಿವಾಸಿಗಳಿಗೆ ಆರಾಮದಾಯಕ ಹವಾನಿಯಂತ್ರಿತ ವಾತಾವರಣವನ್ನು ಒದಗಿಸುತ್ತದೆ.
ಎಲ್ಲಾ ASK ಗಳು ಗಾಲಿಕುರ್ಚಿ ಸ್ನೇಹಿಯಾಗಿದ್ದು, ವಯಸ್ಸಾದವರಿಗೆ ಮತ್ತು ವಿಶೇಷವಾಗಿ ಅಂಗವಿಕಲರಿಗೆ ಸೇವೆ ಸಲ್ಲಿಸಲು ವಿಶೇಷ ನಿಬಂಧನೆಗಳನ್ನು ಹೊಂದಿವೆ. ASK ಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯವಿದೆ: uidai.gov.in ವೆಬ್ಸೈಟ್.
UIDAI ASK ಗಳ (ಆಧಾರ್ ಸೇವಾ ಕೇಂದ್ರಗಳು) ಪಟ್ಟಿಯನ್ನು ನಾನು ಎಲ್ಲಿ ಕಂಡುಹಿಡಿಯಬಹುದು?keyboard_arrow_down
ಎಲ್ಲಾ ಕ್ರಿಯಾತ್ಮಕ ASK ಗಳ ಏಕೀಕೃತ ಪಟ್ಟಿ ಇಲ್ಲಿ ಲಭ್ಯವಿದೆ: ಆಧಾರ್ ಸೇವಾ ಕೇಂದ್ರದ ಪಟ್ಟಿ.
ಈ ASK ಗಳು ಈಗಾಗಲೇ ಬ್ಯಾಂಕ್ಗಳು, ಅಂಚೆ ಕಚೇರಿಗಳು, CSC, BSNL ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತಿರುವ ಆಧಾರ್ ನೋಂದಣಿ ಕೇಂದ್ರಗಳಿಗೆ ಹೆಚ್ಚುವರಿಯಾಗಿ ಲಭ್ಯವಿದೆ.
ಒಂದು ವೇಳೆ ಅದು ಕಳೆದುಹೋದರೆ ಅಥವಾ ಕಳೆದುಹೋದರೆ, ಆಧಾರ್ನ ಪತ್ರವನ್ನು ಪಡೆಯುವ ಪ್ರಕ್ರಿಯೆ ಏನು?keyboard_arrow_down
ಆಯ್ಕೆ I: ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ
- ಆಧಾರ್ ಸಂಖ್ಯೆ ಹೊಂದಿರುವವರು ವೈಯಕ್ತಿಕವಾಗಿ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು.
- ಗುರುತಿನ ಚೀಟಿಯಲ್ಲಿ ಲಭ್ಯವಿರುವ 28 ಅಂಕಿಗಳ ಇ. ಐ. ಡಿ. ಅಥವಾ ಆಧಾರ್ ಸಂಖ್ಯೆಯನ್ನು (14 ಅಂಕಿಗಳ ಸಂಖ್ಯೆಯ ನಂತರ ದಿನಾಂಕದ ಅಂಚೆಚೀಟಿ-yyyyy/mm/dd/hh/mm/ss ಸ್ವರೂಪ) ಒದಗಿಸಿ.
- ದಯವಿಟ್ಟು ಒಂದೇ ಬೆರಳಚ್ಚು ಅಥವಾ ಒಂದೇ ಐರಿಸ್ (ಆರ್ಡಿ ಸಾಧನ) ಬಳಸಿ ಬಯೋಮೆಟ್ರಿಕ್ ದೃಢೀಕರಣವನ್ನು ಒದಗಿಸಿ.
- ಹೊಂದಾಣಿಕೆ ಕಂಡುಬಂದರೆ, ನಿರ್ವಾಹಕರು ಇ-ಆಧಾರ್ ಪತ್ರದ ಮುದ್ರಣವನ್ನು ಒದಗಿಸುತ್ತಾರೆ.
- ಈ ಸೇವೆಯನ್ನು ಒದಗಿಸಲು ಆಪರೇಟರ್ ರೂ.30 ಅನ್ನು ವಿಧಿಸಬಹುದು.
ಆಯ್ಕೆ II: ಅರ್ಜಿದಾರರು 12 ಅಂಕಿಗಳ ಆಧಾರ್ ಸಂಖ್ಯೆ ಅಥವಾ 28 ಅಂಕಿಗಳ ಇ. ಐ. ಡಿ ಮತ್ತು ಕ್ಯಾಪ್ಚಾವನ್ನು ನಮೂದಿಸುವ <ಐ. ಡಿ. 1> ನಲ್ಲಿ ಲಭ್ಯವಿರುವ ಪಿವಿಸಿ ಕಾರ್ಡ್ ಸೇವೆಯನ್ನು ಆದೇಶಿಸುವ ಸೌಲಭ್ಯವನ್ನು ಆಧಾರ್ ಹೊಂದಿರುವವರು ಆರಿಸಿಕೊಳ್ಳಬಹುದು. ತಮ್ಮ ಮೊಬೈಲ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಿದರೋ ಇಲ್ಲವೋ ಆ ಆಧಾರ್ ಹೊಂದಿರುವವರಿಗೆ ಈ ಸೌಲಭ್ಯ ಲಭ್ಯವಿದೆ. ಒಂದು ವೇಳೆ ಆಧಾರ್ನ್ನು ಹೊಂದಿರುವವರ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಲಾಗಿದ್ದರೆ, ಅವರಿಗೆ ಎ. ಡಬ್ಲ್ಯೂ. ಬಿ. ಸಂಖ್ಯೆಯನ್ನು ಒದಗಿಸುವ ಮೂಲಕ ಅವರ ಆದೇಶದ ಸ್ಥಿತಿಯನ್ನು ಪತ್ತೆಹಚ್ಚಲು ಅವಕಾಶವನ್ನು ಒದಗಿಸಲಾಗುತ್ತದೆ.
ಮೊಬೈಲ್ ಸಂಖ್ಯೆಯನ್ನು ಆಧಾರ್ನೊಂದಿಗೆ ಜೋಡಿಸಲಾಗಿರುವ ಕಳೆದುಹೋದ/ಮರೆತುಹೋದ ಆಧಾರ್ ಸಂಖ್ಯೆಯನ್ನು ನಾನು ಹೇಗೆ ಮರಳಿ ಪಡೆಯುವುದು?keyboard_arrow_down
ಕಳೆದುಹೋದ/ಮರೆತುಹೋದ ಆಧಾರ್ ಸಂಖ್ಯೆಯನ್ನು ಈ ಕೆಳಗಿನ ಲಿಂಕ್ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಮರುಪಡೆಯಬಹುದು.
https://myaadhaar.uidai.gov.in/retrieve-eid-uid
ಪ್ರಕ್ರಿಯೆ : ದಯವಿಟ್ಟು ನಿಮ್ಮ ಅಗತ್ಯವನ್ನು ಆಯ್ಕೆ ಮಾಡಿ - ನೀವು ಹಿಂಪಡೆಯಲು ಬಯಸುವ ಆಧಾರ್/ಇಐಡಿ -ಆಧಾರ್ನಲ್ಲಿರುವಂತೆ ಪೂರ್ಣ ಹೆಸರು, ಮೊಬೈಲ್ ಸಂಖ್ಯೆ/ಇಮೇಲ್ ಅನ್ನು ಆಧಾರ್ ಮತ್ತು ಕ್ಯಾಪ್ಚಾದೊಂದಿಗೆ ಲಿಂಕ್ ಮಾಡಿ, ನಂತರ ಒಟಿಪಿಯನ್ನು ನಮೂದಿಸಿ. ಮೊಬೈಲ್ ಒಟಿಪಿ ಆಧಾರಿತ ದೃಢೀಕರಣದ ನಂತರ, ವಿನಂತಿಯ ಪ್ರಕಾರ ಆಧಾರ್ ಸಂಖ್ಯೆ/ಇಐಡಿ ಅನ್ನು ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಕಳುಹಿಸಲಾಗುತ್ತದೆ. ಈ ಸೇವೆ ಉಚಿತವಾಗಿದೆ.
ಮೊಬೈಲ್ ಸಂಖ್ಯೆಯನ್ನು ಆಧಾರ್ನೊಂದಿಗೆ ಜೋಡಿಸದಿದ್ದರೆ, ನನ್ನ ಕಳೆದುಹೋದ/ಮರೆತುಹೋದ ಆಧಾರ್ ಸಂಖ್ಯೆಯನ್ನು ನಾನು ಹೇಗೆ ಕಂಡುಹಿಡಿಯಬಹುದು? keyboard_arrow_down
ನಿಮ್ಮ ಮೊಬೈಲ್/ಇಮೇಲ್ ಐಡಿಯನ್ನು ಆಧಾರ್ನೊಂದಿಗೆ ಜೋಡಿಸದಿದ್ದರೂ ಸಹ, ನಿಮ್ಮ ಕಳೆದುಹೋದ/ಮರೆತುಹೋದ ಆಧಾರ್ ಸಂಖ್ಯೆಯನ್ನು ಪತ್ತೆಹಚ್ಚಲು ಅಥವಾ ಹಿಂಪಡೆಯಲು ಯುಐಡಿಎಐ ಅನೇಕ ಆಯ್ಕೆಗಳನ್ನು ಒದಗಿಸುತ್ತದೆ.
ಆಯ್ಕೆ I: "ಪ್ರಿಂಟ್ ಆಧಾರ್" ಸೇವೆಯನ್ನು ಬಳಸಿಕೊಂಡು ಆಧಾರ್ ನೋಂದಣಿ ಕೇಂದ್ರದಲ್ಲಿ ನಿರ್ವಾಹಕರ ಸಹಾಯದಿಂದ ಆಧಾರ್ ಸಂಖ್ಯೆಯನ್ನು ಮರುಪಡೆಯಬಹುದು.
- ಆಧಾರ್ ಸಂಖ್ಯೆ ಹೊಂದಿರುವವರು ವೈಯಕ್ತಿಕವಾಗಿ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು.
- ಗುರುತಿನ ಚೀಟಿಯಲ್ಲಿ ಲಭ್ಯವಿರುವ 28 ಅಂಕಿಗಳ ಇ. ಐ. ಡಿ. ಯನ್ನು (14 ಅಂಕಿಗಳ ಸಂಖ್ಯೆಯ ನಂತರ ದಿನಾಂಕದ ಅಂಚೆಚೀಟಿ-yyyyy/mm/dd/hh/mm/ss ಸ್ವರೂಪ) ಒದಗಿಸಿ.
- ದಯವಿಟ್ಟು ಒಂದೇ ಬೆರಳಚ್ಚು ಅಥವಾ ಒಂದೇ ಐರಿಸ್ (ಆರ್ಡಿ ಸಾಧನ) ಬಳಸಿ ಬಯೋಮೆಟ್ರಿಕ್ ದೃಢೀಕರಣವನ್ನು ಒದಗಿಸಿ.
- ಹೊಂದಾಣಿಕೆ ಕಂಡುಬಂದರೆ, ನಿರ್ವಾಹಕರು ಇ-ಆಧಾರ್ ಪತ್ರದ ಮುದ್ರಣವನ್ನು ಒದಗಿಸುತ್ತಾರೆ.
- ಈ ಸೇವೆಯನ್ನು ಒದಗಿಸಲು ಆಪರೇಟರ್ Rs.30 ಅನ್ನು ವಿಧಿಸಬಹುದು.
ಆಯ್ಕೆ 2: "ಪ್ರಿಂಟ್ ಆಧಾರ್" ಸೇವೆಯನ್ನು ಬಳಸಿಕೊಂಡು ಆಧಾರ್ ನೋಂದಣಿ ಕೇಂದ್ರದಲ್ಲಿ ನಿರ್ವಾಹಕರ ಸಹಾಯದಿಂದ ಆಧಾರ್ ಸಂಖ್ಯೆಯನ್ನು ಮರುಪಡೆಯಬಹುದು.
- ಆಧಾರ್ ಸಂಖ್ಯೆ ಹೊಂದಿರುವವರು ವೈಯಕ್ತಿಕವಾಗಿ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು.
- ಈ ಕೆಳಗಿನ ಕಡ್ಡಾಯ ಮಾಹಿತಿಯನ್ನು ಒದಗಿಸಿಃ ಹೆಸರು, ಲಿಂಗ, ಜಿಲ್ಲೆ ಅಥವಾ ಪಿನ್ ಕೋಡ್ ಅನ್ನು ಆಧಾರ್ ರಚಿತ ದಾಖಲಾತಿಯ ಪ್ರಕಾರ ಒದಗಿಸಿ.
ಬಹು ದಾಖಲೆಗಳ ಉಪಸ್ಥಿತಿಯಿಂದಾಗಿ ಅಗತ್ಯವನ್ನು ಪತ್ತೆಹಚ್ಚಲು ಸಾಧ್ಯವಾಗದಿದ್ದರೆ, ಹುಡುಕಾಟವನ್ನು ಸಂಕುಚಿತಗೊಳಿಸಲು ಜನನ ವರ್ಷ, ಸಿ/ಒ, ರಾಜ್ಯ ಮುಂತಾದ ಹೆಚ್ಚುವರಿ ಲಭ್ಯವಿರುವ ಜನಸಂಖ್ಯಾ ವಿವರಗಳನ್ನು ಸಹ ಒದಗಿಸಬಹುದು.
- ದಯವಿಟ್ಟು ಒಂದೇ ಬೆರಳಚ್ಚು ಅಥವಾ ಒಂದೇ ಐರಿಸ್ (ಆರ್ಡಿ ಸಾಧನ) ಬಳಸಿ ಬಯೋಮೆಟ್ರಿಕ್ ದೃಢೀಕರಣವನ್ನು ಒದಗಿಸಿ.
- ಹೊಂದಾಣಿಕೆ ಕಂಡುಬಂದರೆ, ನಿರ್ವಾಹಕರು ಇ-ಆಧಾರ್ ಪತ್ರದ ಮುದ್ರಣವನ್ನು ಒದಗಿಸುತ್ತಾರೆ.
- ಈ ಸೇವೆಯನ್ನು ಒದಗಿಸಲು ಆಪರೇಟರ್ ರೂ.30 ಅನ್ನು ವಿಧಿಸಬಹುದು.
ಆಯ್ಕೆ 3: ಯುಐಡಿಎಐ ಸಹಾಯವಾಣಿ ಸಂಖ್ಯೆ 1947ಕ್ಕೆ ಕರೆ ಮಾಡುವ ಮೂಲಕ ಕಳೆದುಹೋದ/ಮರೆತುಹೋದ ಆಧಾರ್ ಸಂಖ್ಯೆಯನ್ನು ಮರಳಿ ಪಡೆಯುವುದು.
ಹಂತ 1
- 1947ಕ್ಕೆ ಕರೆ ಮಾಡಿ (ಟೋಲ್-ಫ್ರೀ).
- ನಿಮ್ಮ ಕೋರಿಕೆಯ ಮೇರೆಗೆ ಕಾರ್ಯನಿರ್ವಾಹಕರಿಗೆ ಅಗತ್ಯವಿರುವ ಜನಸಂಖ್ಯಾ ವಿವರಗಳನ್ನು ಒದಗಿಸಿ.
- ಹೊಂದಾಣಿಕೆ ಕಂಡುಬಂದಲ್ಲಿ ಕಾರ್ಯನಿರ್ವಾಹಕರು ಕರೆ ಮಾಡಿದಾಗ ಇಐಡಿಯನ್ನು ಒದಗಿಸಲಾಗುತ್ತದೆ. ಈ ಸೇವೆ ಉಚಿತವಾಗಿದೆ.
ಹಂತ 2 (ಐವಿಆರ್ಎಸ್)
- ಮತ್ತೆ 1947ಕ್ಕೆ ಕರೆ ಮಾಡಿ. ಭಾಷಾ ಆಯ್ಕೆಯನ್ನು ಆಯ್ಕೆ ಮಾಡಿದ ನಂತರ-ಕೀ-ಇನ್ ಆಯ್ಕೆ 1 (ವಿನಂತಿಯ ಸ್ಥಿತಿ) ನಂತರ ಆಯ್ಕೆ 2 (ಆಧಾರ್ ನೋಂದಣಿ ಸ್ಥಿತಿಯ ವಿನಂತಿ).
- ಐ. ವಿ. ಆರ್. ಎಸ್. ಗೆ ಆಧಾರ್ ರಚಿತ ದಾಖಲಾತಿಯ ಲಭ್ಯವಿರುವ ಇ. ಐ. ಡಿ. ಸಂಖ್ಯೆಯನ್ನು ಒದಗಿಸಿ.
- ಐ. ವಿ. ಆರ್. ಎಸ್. ಗೆ ದಾಖಲಾತಿಯನ್ನು ರಚಿಸಿದ ಆಧಾರ್ನ ಪ್ರಕಾರ ಹುಟ್ಟಿದ ದಿನಾಂಕ ಮತ್ತು ಪಿನ್ ಕೋಡ್ ಅನ್ನು ಒದಗಿಸಿ.
- ಹೊಂದಾಣಿಕೆ ಕಂಡುಬಂದರೆ, ಐ. ವಿ. ಆರ್. ಎಸ್. ಆಧಾರ್ ಸಂಖ್ಯೆಯನ್ನು ತಿಳಿಸುತ್ತದೆ. ಈ ಸೇವೆ ಉಚಿತವಾಗಿದೆ.
ಆಧಾರ್ ಆನ್ಲೈನ್ ಸೇವೆಯನ್ನು ನವೀಕರಿಸುವ ಮೂಲಕ ನಾನು ಯಾವ ವಿವರಗಳನ್ನು ನವೀಕರಿಸಬಹುದು?keyboard_arrow_down
ಈ ಆನ್ಲೈನ್ ಪೋರ್ಟಲ್ ಮೂಲಕ, ನೀವು ವಿಳಾಸ ಮತ್ತು ಡಾಕ್ಯುಮೆಂಟ್ ನವೀಕರಣವನ್ನು ಮಾತ್ರ ಮಾಡಬಹುದು.
ಯಾವುದೇ ಇತರ ನವೀಕರಣಗಳಿಗಾಗಿ, ದಯವಿಟ್ಟು ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.
ಆನ್ಲೈನ್ನಲ್ಲಿ ವಿಳಾಸವನ್ನು ನವೀಕರಿಸಲು ಯಾವುದೇ ಶುಲ್ಕವಿದೆಯೇ?keyboard_arrow_down
ಹೌದು, ವಿಳಾಸದ ಆನ್ಲೈನ್ ನವೀಕರಣಕ್ಕಾಗಿ ನೀವು ರೂ. 50/- (GST ಸೇರಿದಂತೆ).
ಆಧಾರ್ನಲ್ಲಿ ನನ್ನ ಹೆಸರಿಗೆ ನಾನು ಯಾವ ಬದಲಾವಣೆಗಳನ್ನು ಮಾಡಬಹುದು?keyboard_arrow_down
ನಿಮ್ಮ ಹೆಸರಿನಲ್ಲಿ ಸಣ್ಣಪುಟ್ಟ ತಿದ್ದುಪಡಿಗಳು ಅಥವಾ ಹೆಸರು ಬದಲಾವಣೆಗಾಗಿ, ದಯವಿಟ್ಟು ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.
ಆಧಾರ್ ಡೇಟಾವನ್ನು ಎಷ್ಟು ಬಾರಿ ನವೀಕರಿಸಬಹುದು?keyboard_arrow_down
ಆಧಾರ್ ಮಾಹಿತಿಯ ನವೀಕರಣಕ್ಕಾಗಿ ಈ ಕೆಳಗಿನ ಮಿತಿಗಳು ಅನ್ವಯಿಸುತ್ತವೆ:
- ಹೆಸರು: ಜೀವಿತಾವಧಿಯಲ್ಲಿ ಎರಡು ಬಾರಿ
- ಲಿಂಗ: ಜೀವನದಲ್ಲಿ ಒಮ್ಮೆ
- ಹುಟ್ಟಿದ ದಿನಾಂಕ: ಜೀವನದಲ್ಲಿ ಒಮ್ಮೆ
ಆನ್ಲೈನ್ ವಿಳಾಸ ನವೀಕರಣಕ್ಕಾಗಿ ಯಾವ ದಾಖಲೆಗಳು ಅಗತ್ಯವಿದೆ?keyboard_arrow_down
ವಿಳಾಸ ನವೀಕರಣ ಆನ್ಲೈನ್ ಸೇವೆಯ ಸಂದರ್ಭದಲ್ಲಿ ನಾನು ನನ್ನ ಪೋಷಕ ದಾಖಲೆಗಳನ್ನು ಹೇಗೆ ಸಲ್ಲಿಸಬಹುದು?keyboard_arrow_down
ಅಪ್ಡೇಟ್ ವಿಳಾಸ ಆನ್ಲೈನ್ ಸೇವೆಯಲ್ಲಿ pdf ಅಥವಾ jpeg ಸ್ವರೂಪದಲ್ಲಿ ಪೋಷಕ ಡಾಕ್ಯುಮೆಂಟ್ನ ಸ್ಕ್ಯಾನ್/ಚಿತ್ರವನ್ನು ಅಪ್ಲೋಡ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ನಿಮ್ಮ ವಿನಂತಿಯನ್ನು ಪ್ರಕ್ರಿಯೆಗೊಳಿಸಲು ದಯವಿಟ್ಟು ಸರಿಯಾದ ಪೋಷಕ ದಾಖಲೆಯನ್ನು ಅಪ್ಲೋಡ್ ಮಾಡಿ. ಪಾಸ್ಪೋರ್ಟ್, ಬಾಡಿಗೆ ಮತ್ತು ಆಸ್ತಿ ಒಪ್ಪಂದದಂತಹ ಕೆಲವು ದಾಖಲೆಗಳಿಗಾಗಿ, ಬಹು ಪುಟಗಳ ಚಿತ್ರದ ಅಗತ್ಯವಿದೆ.
ಆಧಾರ್ ಆನ್ಲೈನ್ ಸೇವೆಯನ್ನು ನವೀಕರಿಸುವ ಮೂಲಕ ನಾನು ನನ್ನ ಸ್ಥಳೀಯ ಭಾಷೆಯನ್ನು ನವೀಕರಿಸಬಹುದೇ?keyboard_arrow_down
ಪ್ರಸ್ತುತ ನೀವು ಆನ್ಲೈನ್ ಪೋರ್ಟಲ್ ಮೂಲಕ ನಿಮ್ಮ ಸ್ಥಳೀಯ ಭಾಷೆಯನ್ನು ನವೀಕರಿಸಲು ಸಾಧ್ಯವಿಲ್ಲ.
ಆಧಾರ್ ಆನ್ಲೈನ್ ಸೇವೆಯನ್ನು ನವೀಕರಿಸುವ ಮೂಲಕ ನಾನು ನನ್ನ ಜನ್ಮ ದಿನಾಂಕವನ್ನು ನವೀಕರಿಸಬಹುದೇ?keyboard_arrow_down
ಪ್ರಸ್ತುತ ಈ ವೈಶಿಷ್ಟ್ಯವನ್ನು ಆನ್ಲೈನ್ ಪೋರ್ಟಲ್ ಬೆಂಬಲಿಸುವುದಿಲ್ಲ ಮತ್ತು ಜನ್ಮ ದಿನಾಂಕವನ್ನು ನವೀಕರಿಸಲು (DoB) ದಯವಿಟ್ಟು DoB ಪುರಾವೆ ದಾಖಲೆಯೊಂದಿಗೆ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.
ನಾನು ಈಗಾಗಲೇ ನನ್ನ ಆಧಾರ್ನಲ್ಲಿ ಜನ್ಮ ದಿನಾಂಕವನ್ನು ಒಮ್ಮೆ ನವೀಕರಿಸಿದ್ದೇನೆ. ನಾನು ಅದನ್ನು ನವೀಕರಿಸಬಹುದೇ / ಸರಿಪಡಿಸಬಹುದೇ?keyboard_arrow_down
ಇಲ್ಲ. ನೀವು ನಿಮ್ಮ ಜನ್ಮ ದಿನಾಂಕವನ್ನು (DoB) ಒಮ್ಮೆ ಮಾತ್ರ ನವೀಕರಿಸಬಹುದು. ಅಸಾಧಾರಣ ಸಂದರ್ಭಗಳಲ್ಲಿ ಮತ್ತಷ್ಟು ಜನ್ಮ ದಿನಾಂಕವನ್ನು (DoB) ಬದಲಾಯಿಸಬಹುದು, ಈ ನಿಟ್ಟಿನಲ್ಲಿ ದಯವಿಟ್ಟು 1947 ಗೆ ಕರೆ ಮಾಡಿ.
ವಿನಂತಿಯ ಸಲ್ಲಿಕೆಯು ಜನಸಂಖ್ಯಾ ಮಾಹಿತಿಯ ನವೀಕರಣವನ್ನು ಖಾತರಿಪಡಿಸುತ್ತದೆಯೇ?keyboard_arrow_down
ಮಾಹಿತಿಯ ಸಲ್ಲಿಕೆಯು ಆಧಾರ್ ಡೇಟಾದ ನವೀಕರಣವನ್ನು ಖಾತರಿಪಡಿಸುವುದಿಲ್ಲ. ಅಪ್ಡೇಟ್ ಆಧಾರ್ ಆನ್ಲೈನ್ ಸೇವೆಯ ಮೂಲಕ ಸಲ್ಲಿಸಲಾದ ಬದಲಾವಣೆಗಳನ್ನು UIDAI ಯಿಂದ ಪರಿಶೀಲನೆ ಮತ್ತು ಊರ್ಜಿತಗೊಳಿಸುವಿಕೆಗೆ ಒಳಪಡಿಸಲಾಗುತ್ತದೆ ಮತ್ತು ಮೌಲ್ಯೀಕರಣದ ನಂತರ ಮಾತ್ರ ಬದಲಾವಣೆಯ ವಿನಂತಿಯನ್ನು ಆಧಾರ್ ನವೀಕರಣಕ್ಕಾಗಿ ಮತ್ತಷ್ಟು ಪ್ರಕ್ರಿಯೆಗೊಳಿಸಲಾಗುತ್ತದೆ.