ಆಧಾರ್ ನ ಬಗ್ಗೆ

ಆಧಾರ್ ಸಂಖ್ಯೆಯು , ಪ್ರಾಧಿಕಾರದಿಂದ ನಿರ್ದಿಷ್ಟಪಡಿಸಲಾಗಿರುವ ಪರಿಶೀಲನಾ ಪ್ರಕ್ರಿಯೆಗಳು ತೃಪ್ತಿಕರವಾಗಿ ಪೂರ್ಣಗೊಂಡನಂತರ ಭಾವಿಗುಪ್ರಾವು (“ಪ್ರಾಧಿಕಾರ”) ಭಾರತದ ನಿವಾಸಿಗಳಿಗೆ ನೀಡುವ 12 ಅಂಕೆಗಳ ಯಾದೃಚ್ಛಿಕ ಸಂಖ್ಯೆಯಾಗಿರುತ್ತದೆ. ಯಾವುದೇ ವ್ಯಕ್ತಿಯು, ವಯಸ್ಸು ಎಷ್ಟೇ ಆಗಿರಲಿ ಹಾಗೂ ಲಿಂಗವು ಯಾವುದೇ ಆಗಿರಲಿ, ಆಧಾರ್ ಸಂಖ್ಯೆಯನ್ನು ಪಡೆದುಕೊಳ್ಳುವ ಸಲುವಾಗಿ ಸ್ವಯಂಪ್ರೇರಿತವಾಗಿ ನೋಂದಣಿ ಮಾಡಿಸಿಕೊಳ್ಳಬಹುದು. ನೋಂದಣಿ ಮಾಡಿಸಿಕೊಳ್ಳಲು ಸಿದ್ಧವಿರುವ ವ್ಯಕ್ತಿಯು ಕನಿಷ್ಟ ಜನಸಂಖ್ಯಾಶಾಸ್ತ್ರ ಹಾಗೂ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಒಟ್ಟಾರೆ ಉಚಿತವಾಗಿರುವ ಅಂದರೆ ಯಾವುದೇಮೊತ್ತವನ್ನೂ ಪಾವತಿಸಬೇಕಾಗಿರದ ನೋಂದಣಿ ಪ್ರಕ್ರಿಯೆಯ ವೇಳೆಯಲ್ಲಿ ಒದಗಿಸಬೇಕಾಗುತ್ತದೆ. ಓರ್ವ ವ್ಯಕ್ತಿಯು ಕೇವಲ ಒಂದು ಸಲ ಮಾತ್ರ ಆಧಾರ್ ಗಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಹಾಗೂ ಮಾಹಿತಿಯಲ್ಲಿನ ನಕಲುಗಳನ್ನು ಹೊರತೆಗೆದನಂತರ ಜನಸಂಖ್ಯಾಶಾಸ್ತ್ರ ಹಾಗೂ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯಲ್ಲಿನ ನಕಲನ್ನು ಹೊರತೆಗೆಯುವ ಪ್ರಕ್ರಿಯೆಯ ಮೂಲಕ ವಿಶಿಷ್ಟತೆಯನ್ನು ಸಾಧಿಸಲಾಗುವುದರಿಂದ, ಕೇವಲ ಒಂದು ಆಧಾರ್ ಅನ್ನು ತಂತ್ರಾಂಶ ಅನ್ವಯದಿಂದ ಪಡೆಯತಕ್ಕದ್ದು.

ಆಧಾರ್ ಸಂಖ್ಯೆಯನ್ನು ವೆಚ್ಚ-ಪರಿಣಾಮಕಾರಿತ್ವದ ಮಾರ್ಗದಲ್ಲಿ ಆನ್-ಲೈನ್ ನಲ್ಲಿ ಪರಿಶೀಲಿಸಬಹುದು, ಅದು ವಿಶಿಷ್ಟವಾಗಿದೆ ಹಾಗೂ ನಕಲುಗಳನ್ನು ಹಾಗೂ ಖೋಟಾ ಗುರುತುಗಳನ್ನು ಹೊರತೆಗೆಯುವಲ್ಲಿ ಸಾಕಷ್ಟು ಸದೃಢವಾಗಿದೆ ಹಾಗೂ ಅದನ್ನು ಪರಿಣಾಮಕಾರಿತ್ವದಿಂದ ಕೂಡಿದ ಸೇವಾ ವಿತರಣೆ ಹಾಗೂ ಅದರಿಂದಾಗಿ ಪರದರ್ಶಕ ಮತ್ತು ಉತ್ತಮ ಆಡಳಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಅನೇಕ ಸರ್ಕಾರಿ ಜನಕಲ್ಯಾಣ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಹೊರತರುವಲ್ಲಿ ಒಂದು ಮೂಲ/ಪ್ರಾಥಮಿಕ ಗುರುತಿಸುವಿಕೆಯ ಸಾಧನವಾಗಿದೆ. ವಿಶ್ವವ್ಯಾಪಕವಾಗಿ ತನ್ನದೇ ಆದಂತಹ ವೈಶಿಷ್ಟ್ಯತೆಯನ್ನು ಹೊಂದಿರುವಂತಹ ಕಾರ್ಯಕ್ರಮವು ಇದೊಂದೇ ಆಗಿದೆ, ಅದರಲ್ಲಿ ಜನತೆಗೆ ಅಷ್ಟೊಂದು ಬೃಹತ್ ಪ್ರಮಾಣದಲ್ಲಿ ಅತ್ಯಾಧುನಿಕ ಅಂಕೀಯ ಹಾಗೂ ಆನ್-ಲೈನ್ ಗುರುತನ್ನು ಉಚಿತವಾಗಿ ಅನುವು ಮಾಡಲಾಗಿದೆ ಹಾಗೂ ದೇಶದಲ್ಲಿನ ಸೇವಾ ವಿತರಣಾ ಕಾರ್ಯಚಟುವಟಿಕೆಗಳ ಮಾರ್ಗವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

ಆಧಾರ್ ಸಂಖ್ಯೆಯು ಯಾವುದೇ ಗುಪ್ತಚರ ಮಾಹಿತಿ ರಹಿತವಾಗಿರುತ್ತದೆ ಹಾಗೂ ಜಾತಿ, ಮತ, ಆದಾಯ, ಆರೋಗ್ಯ, ಭೌಗೋಳಿಕ ಆಧಾರದ ಮೇರೆಗೆ ಜನತೆಯ ಪಾರ್ಶ್ವಚಿತ್ರಣವನ್ನು ನೀಡುವುದಿಲ್ಲ. ಆಧಾರ್ ಸಂಖ್ಯೆಯು ಗುರುತಿನ ಒಂದು ಸಾಕ್ಷಾಧಾರವಾಗಿರುತ್ತದೆ, ಆದಾಗ್ಯೂ, ಅದು ಆಧಾರ್ ಸಂಖ್ಯೆಯನ್ನು ಹೊಂದಿರುವವರಿಗೆ ಸಂಬಂಧಿಸಿದಂತೆ ಅದು ನಾಗರಿಕತೆಯ ಹಕ್ಕನ್ನು ನೀಡುವುದಿಲ್ಲ

ಸಾಮಾಜಿಕ ಹಾಗೂ ಹಣಕಾಸಿನ ಒಳಗೂಡಿಸುವಿಕೆ, ಸಾರ್ವಜನಿಕ ವಲಯದ ವಿತರಣಾ ಸುಧಾರಣೆಗಳು, ವಿತ್ತೀಯ ಆಯವ್ಯಯಗಳ ನಿರ್ವಹಣೆ, ಅನುಕೂಲತೆಯನ್ನು ಹೆಚ್ಚಿಸಿ ಹಾಗೂ ಅಡಚನೆ-ಮುಕ್ತ ಜನತೆಯನ್ನು-ಕೇಂದ್ರೀಕೃತ ಆಡಳಿತವನ್ನು ಪ್ರೋತ್ಸಾಹಿಸುವುದಕ್ಕೆ ಆಧಾರ್ ಒಂದು ಚಾತುರ್ಯತೆಯಿಂದ ಕೂಡಿದ ಕಾರ್ಯನೀತಿಯಾಗಿದೆ. ಆಧಾರ್ ಅನ್ನು ಒಂದು ಶಾಶ್ವತ ಹಣಕಾಸು ಸಂಬಂಧಿತ ವಿಳಾಸವನ್ನಾಗಿ ಬಳಸಿಕೊಳ್ಳಬಹುದು ಹಾಗೂ ಅದು ಸಮಾಜದ ಸಾಮಾನ್ಯ ಜೀವನದ ಅನುಕೂಲಗಳನ್ನು ಹೊಂದಿರದ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಹಣಕಾಸಿನ ಒಳಗೂಡಿಸುವಿಕೆಯ ಅನುಕೂಲತೆಯನ್ನು ಒದಗಿಸುತ್ತದೆ ಹಾಗೂ ಆದ್ದರಿಂದ ವಿತರಣಾ ನ್ಯಾಯಪರತೆ ಹಾಗೂ ಸಮಾನತೆಯ ಒಂದು ಸಾಧನವಾಗಿರುತ್ತದೆ. ಆಧಾರ್ ಗುರುತು ವೇದಿಕೆಯು ’ಅಂಕೀಯ ಭಾರತದ ಪ್ರಮುಖ ಆಧಾರ ಸ್ಥಂಭಗಳ ಪೈಕಿ ಒಂದಾಗಿದೆ, ಅದರಲ್ಲಿ ದೇಶದ ಪ್ರತಿಯೋರ್ವ ನಿವಾಸಿಗೆ ಒಂದು ವಿಶಿಷ್ಟ ಗುರುತನ್ನು ಒದಗಿಸಲಾಗುತ್ತದೆ. ಆಧಾರ್ ಕಾರ್ಯಕ್ರಮವು ಈಗಾಗಲೇ ಅನೇಕ ಮೈಲುಗಲ್ಲುಗಳನ್ನು ಸಾಧಿಸಿದೆ ಹಾಗೂ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿ ಆಧಾರಿತ ವಿಶ್ವದಲ್ಲಿಯೇ ಅತಿದೊಡ್ಡ ವ್ಯವಸ್ಥೆಯಾಗಿದೆ.

ಆಧಾರ್ ಗುರುತಿಸುವಿಕೆ ವೇದಿಕೆಯು ತನ್ನ ವೈಶಿಷ್ಟತೆ, ದೃಢೀಕರಣ, ಹಣಕಾಸಿನ/ವಿತ್ತೀಯ ವಿಳಾಸ ಹಾಗೂ ಇ-ಕೆವೈಸಿಗಳ ಅಂತರ್ಗತ ವೈಶಿಷ್ಟತೆಯೊಂದಿಗೆ, ನಿವಾಸಿಯ ಆಧಾರ್ ಸಂಖ್ಯೆಯನ್ನು ಬಳಸುವುದರ ಮೂಲಕವೇ ವಿವಿಧ ಸಹಾಯಧನಗಳು, ಪ್ರಯೋಜನಗಳು ಹಾಗೂ ಸೇವೆಗಳ ವಿತರಣೆಯಲ್ಲಿ ದೇಶದ ಜನತೆಯನ್ನು ನೇರವಾಗಿ ತಲಪುವಲ್ಲಿ ಭಾರತ ಸರ್ಕಾರಕ್ಕೆ ಅನುಕೂಲ ಕಲ್ಪಿಸುತ್ತದೆ