ಆಧಾರ್ ಅನ್ನು ಪಡೆಯುವಿಕೆ

ತಂತ್ರಾಂಶಅನ್ವಯದಿಂದಆಧಾರ್ಅನ್ನುಪಡೆಯುವಿಕೆಯು, ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವಿಕೆ, ಪೊಟ್ಟಣವನ್ನು ಸ್ಥಿರೀಕರಿಸುವಿಕೆ, ಜನಸಂಖ್ಯಾಶಾಸ್ತ್ರ ಹಾಗೂ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಗಳಲ್ಲಿ ನಕಲುಗಳನ್ನು ಹೊರತೆಗೆಯುವಿಕೆ, ಇತ್ಯಾದಿ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ. ಈ ಕೆಳಗಿನವುಗಳನ್ನು ಖಚಿತಪಡಿಸಿಕೊಂಡಲ್ಲಿ ಮಾತ್ರ ಆಧಾರ್ ಅನ್ನು ಯಶಸ್ವಿಯಾಗಿ ಪಡೆಯಬಹುದು:

  • ನೋಂದಣಿಗೆ ಸಂಬಂಧಿತ ಮಾಹಿತಿಯ ಗುಣಮಟ್ಟವು ಭಾವಿಗುಪ್ರಾವು ನಿರ್ದಿಷ್ಟಪಡಿಸಿರುವ ಮಾನದಂಡಗಳನ್ನು ಪೂರೈಸಿದಾಗ
  • ನೋಂದಣಿ ಪೊಟ್ಟಣಗಳು ಸಿಐಡಿಆರ್ ನಲ್ಲಿ ಮಾಡಲಾಗುವ ಎಲ್ಲಾ ದೃಢೀಕರಣಗಳಲ್ಲೂ ಯಶಸ್ವಿಗೊಂಡಾಗ
  • ಜನಸಂಖ್ಯಾಶಾಸ್ತ್ರ/ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಗಳಲ್ಲಿ ಯಾವುದೇ ನಕಲುಗಳೂ ಕಂಡುಬರದಿದ್ದಲ್ಲಿ

ಮೇಲಿನ ಷರತ್ತುಗಳಲ್ಲಿ ಯಾವುದೇ ಒಂದು ಪೂರೈಕೆಯಾಗದಿದ್ದಲ್ಲಿ, ಆಧಾರ್ ಸಂಖ್ಯೆಯನ್ನು ನೀಡಲಾಗುವುದಿಲ್ಲ ಹಾಗೂ ನೋಂದಣಿಯು ತಿರಸ್ಕೃತಗೊಳ್ಳುತ್ತದೆ. ತಂತ್ರಾಂಶ ಅನ್ವಯದಿಂದ ಆಧಾರ್ ಅನ್ನು ಪಡೆಯುವಲ್ಲಿಗೆ ದಾರಿ ಮಾಡಿಕೊಡುವಂತಹ ಪ್ರಕ್ರಿಯೆಗಳನ್ನು ಈ ಕೆಳಗೆ ವಿವರಿಸಲಾಗಿದೆ.

ಸಿಐಡಿಆರ್ ಗೆ ನಿವಾಸಿಯ ಮಾಹಿತಿಯನ್ನು ಊಡಿಕೆ ಮಾಡುವುದು

ಪ್ರತಿಯೋರ್ವ ನಿವಾಸಿಯ ನೋಂದಣಿಯು ತಂತ್ರಾಂಶ ಅನ್ವಯ ಪೊಟ್ಟಣದ ಒಂದು ನಮೂನೆಯಲ್ಲಿರುತ್ತದೆ, ಕ್ಲೈಂಟ್ ತಂತ್ರಾಂಶ ಅನ್ವಯದಲ್ಲಿಯೇ ನೋಂದಣಿಯು ಪೂರ್ಣಗೊಂಡನಂತರ ಅದನ್ನು ಲಿಪ್ಯಂತರಣಗೊಳಿಸಲಾಗುವುದು ಹಾಗೂ ಭಾವಿಗುಪ್ರಾವು ನೋಂದಣಿ ಸಂಸ್ಥೆಗಳಿಗೆ ಒದಗಿಸಿರುವ ಊಡಿಕೆ ಕ್ಲೈಂಟ್ ತಂತ್ರಾಂಶ ಅನ್ವಯ ಕೇಂದ್ರ ಗುರುತು ಭಂಡಾರಕ್ಕೆ (ಸಿಐಡಿಆರ್) ಊಡಿಕೆ ಮಾಡಲಾಗುವುದು. ಸರ್ವರಿಗೆ ನಕಲಿ ಪೊಟ್ಟಣಗಳನ್ನು ಊಡಿಕೆ ಮಾಡುವುದನ್ನು ತಡೆಯುವ ಉದ್ದೇಶದಿಂದ ಊಡಿಕೆ ಮಾಡಲಾದ ಪೊಟ್ಟಣ ದಾಖಲೆಗಳನ್ನು ಕ್ಲೈಂಟ್ ತಂತ್ರಾಂಶ ಅನ್ವಯದಲ್ಲಿ ನಿರ್ವಹಿಸಲಾಗುವುದು, ಈ ರೀತಿಯಾಗಿ ಸಂಸ್ಕರಣಾ ವೇಳೆಯಲ್ಲಿ ಉಳಿತಾಯಗೊಳ್ಳುವುದಲ್ಲದೇ ಪೊಟ್ಟಣ ತಿರಸ್ಕಾರಗೊಳ್ಳುವುದನ್ನು ತಡೆಯಬಹುದು. ಸರ್ವರಿಗೆ ಎಲ್ಲಾ ಮಾಹಿತಿ ವರ್ಗಾವಣೆಯನ್ನು ಭದ್ರತೆಯಿಂದ ಕೂಡಿದ ಕಡತ ವರ್ಗಾವಣೆ ನಿಯಮಾವಳಿಯನ್ನು ಬಳಸಿಕೊಳ್ಳುವ ಮೂಲಕ ಕಾರ್ಯನಿರ್ವಹಿಸಲಾಗುವುದು ಮತ್ತು ಆದ್ದರಿಂದ ಮಾಹಿತಿಯು ಇತರೆ ಅನಧಿಕೃತ ಸಂಸ್ಥೆಗಳಿಗೆ ಸೋರಿಕೆಗೊಳ್ಳುವ ಸಂಭಾವ್ಯತೆಯಿರುವುದಿಲ್ಲ . ನಿವಾಸಿಯಿಂದ ಸ್ವೀಕರಿಸಲಾದ ದಾಖಲೆಗಳನ್ನು ಸ್ಕ್ಯಾನು ಮಾಡಲಾಗುವುದು ಹಾಗೂ ಅವು ನೋಂದಣಿ ಪೊಟ್ಟಣಗಳ ಒಂದು ಭಾಗವಾಗುವವು, ಅವನ್ನು ಸಿಐಡಿಆರ್ ಗೆ ಊಡಿಕೆ ಮಾಡಲಾಗುವುದು.

ಸಿಐಡಿಆರ್ ವಿವೇಕ ಪರೀಕ್ಷಣೆಗಳು: ಪ್ರತಿಯೊಂದು ನೋಂದಣಿ ಪೊಟ್ಟಣವನ್ನೂ ಸಂಸ್ಕರಣೆಗಾಗಿ ಸಿಐಡಿಆರ್ ನ ಉತ್ಪಾದನಾ ವಲಯಕ್ಕೆಸಂಸ್ಕರಣೆಗಾಗಿ ಕಳುಹಿಸುವ ಮೊದಲು ಸ್ವಯಂಚಾಲಿತ ಪ್ರಕ್ರಿಯೆಯನ್ನು ಬಳಸಿಕೊಳ್ಳುವ ಮೂಲಕ ಸಿಐಡಿಆರ್ ಡಿಎಂಝಡ್ ನಲ್ಲಿನ ಚೆಕ್ ಸಮ್ ಗಳು, ಪೊಟ್ಟಣದಲ್ಲಿನಮೂಲಮಾಹಿತಿ, ಇತ್ಯಾದಿಗಳದೃಢೀಕರಣಕ್ಕಾಗಿಪರಿಪೂರ್ಣವಾಗಿ ಪರೀಕ್ಷಿಸಲಾಗುವುದು

ಮಾಹಿತಿ ಪತ್ರಾಗಾರ (ಆರ್ಚೀವ್): ಮಾಹಿತಿಯನ್ನು ಭದ್ರತೆಯಿಂದ ಇಡುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಸಿಐಡಿಆರ್ ನಲ್ಲಿ ಪೊಟ್ಟಣಗಳಲ್ಲಿನ ಅಡಕಗಳನ್ನು ಓದಲಾಗುವುದು ಹಾಗೂ ಒಂದು ಟೇಬಲ್ಲಿನಲ್ಲಿ ಸಂಗ್ರಹಿಸಿಡಲಾಗುವುದು. ಪತ್ರಾಗಾರ (ಆರ್ಚೀವ್) ವ್ಯವಸ್ಥೆಯು ಈ ಕೆಳಗಿನ ಅಗತ್ಯತೆಗಳನ್ನು ಹೊಂದಿರುತ್ತದೆ:

  • ಎಲ್ಲಾ ಮೂಲ ಪೊಟ್ಟಣಗಳನ್ನು (ನೋಂದಣಿಗಳು, ಇಂದಿನದಿನದನ್ನಾಗಿ ಮಾಡಿರುವವುಗಳು, ಇತ್ಯಾದಿ) ಅವುಗಳು ಇರುವ ರೀತಿಯಲ್ಲಿಯೇ ಅತ್ಯುತ್ತಮವಾಗಿ ಲಭ್ಯವಾಗುವ ರೀತಿಯಲ್ಲಿ ಹಾಗೂ ಮಾಹಿತಿಯ ಶೂನ್ಯ ನಷ್ಟದೊಂದಿಗೆ ಎಂದೆಂದಿಗೂ/ಶಾಶ್ವತವಾಗಿ ಇರುವ ರೀತಿಯಲ್ಲಿ ಆರ್ಚೀವ್ ಮಾಡುವ ಅಗತ್ಯತೆಯಿರುತ್ತದೆ.
  • ಆರ್ಚೀವ್ ಮಾಡಿದ ಪೊಟ್ಟಣವನ್ನುಸುಭದ್ರತೆಯಿಂದ ಕಾಪಾಡತಕ್ಕದ್ದು ಹಾಗೂ ಪ್ರಧಾನ/ಕೋರ್ ನೋಂದಣಿಯಿಂದ ಹಾಗೂ ದೃಢೀಕರಣ ವ್ಯವಸ್ಥೆಗಳಿಂದ ಪ್ರತ್ಯೇಕಿಸಿರತಕ್ಕದ್ದು
  • ಆರ್ಚೀವಲ್ ವ್ಯವಸ್ಥೆಯು ಬೇಡಿಕೆಯ ಆಧಾರದ ಮೇರೆಗೆ ಮಾಹಿತಿಯನ್ನು ಒಂದು ಸೂಕ್ರ ಪ್ರವೇಶ ನಿಯಂತ್ರಣ ಹಾಗೂ ಅನುಮೋದನೆಗಳೊಂದಿಗೆ ಪಡೆದುಕೊಳ್ಳುವುದನ್ನು ಅನುವು ಮಾಡಿರಬೇಕು.
  • ಶೂನ್ಯ ಮಾಹಿತಿ ನಷ್ಟವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಆರ್ಚೀವ್ ಮಾಡಲಾದ ಮಾಹಿತಿಯ ನಿಯತ ಪೂರಕ/ಬೆಂಬಲವನ್ನು ತೆಗೆದುಕೊಳ್ಳಲಾಗುವುದು

ಪ್ರಧಾನ ಸಂಸ್ಕರಣಾ ಮಾರ್ಗ

ವಿವೇಕ ಪರೀಕ್ಷಣೆಯು ಯಶಸ್ವಿಯಾದನಂತರ ನೋಂದಣಿ ಪೊಟ್ಟಣವನ್ನು ಪ್ರಧಾನ ಸಂಸ್ಕರಣಾ ಮಾರ್ಗಕ್ಕೆ ವರ್ಗಾಯಿಸಲಾಗುವುದು. ಅತ್ಯುನ್ನತ ಮಟ್ಟದಲ್ಲಿ ಇದು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:

ಸ್ವಯಂಚಾಲಿತ ಮಾಹಿತಿ ದೃಢೀಕರಣಜನಸಂಖ್ಯಾ ಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಗಾಗಿ ಸಿಐಡಿಆರ್ ನಲ್ಲಿ ಈ ಕೆಳಗಿನ ಸ್ಥಿರೀಕರಣ ಪರೀಕ್ಷಣೆಗಳನ್ನು ಮಾಡಲಾಗುವುದು

  • ಹೆಸರು ಮತ್ತು ವಿಳಾಸ ಸ್ಥಿರೀಕರಣಗಳು
  • ಭಾಷೆಯ ಸ್ಥಿರೀಕರಣ
  • ಪಿನ್ ಕೋಡ್ ಹಾಗೂ ಆಡಳಿತಾತ್ಮಕ ಪ್ರದೇಶಗಳು
  • ನಿರ್ವಾಹಕರು, ಮೇಲ್ವಿಚಾರಕರು, ಪರಿಚಯಕಾರರ ದೃಢೀಕರಣ
  • ಇತರೆಮಾಹಿತಿಹಾಗೂಸಂಸ್ಕರಣಾಸ್ಥಿರೀಕರಣಗಳು

ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದಂತೆ ನಕಲಿ ಮಾಹಿತಿಯನ್ನು ಹೊರತೆಗೆಯುವಿಕೆ: ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದಂತೆ ನಕಲಿ ಮಾಹಿತಿಯನ್ನು ಹೊರತೆಗೆಯುವಿಕೆಯನ್ನು ಪ್ರಮುಖವಾಗಿ ತಂತ್ರಾಂಶ ಅನ್ವಯಕ್ಕೆ ಅನುದ್ದಿಷ್ಟವಾಗಿ ಸಲ್ಲಿಸಲಾಗುವಂತಹಸಣ್ಣಪುಟ್ಟ ನಕಲಿ ಮಾಹಿತಿಯನ್ನು ಸೆರೆಹಿಡಿಯುವುದಕ್ಕಾಗಿ ಬಳಸಿಕೊಳ್ಳಲಾಗುವುದು (ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಎಲ್ಲಾ ಕ್ಷೇತ್ರಗಳು ಒಂದೇ ತರನಾಗಿರುವಲ್ಲಿ ಕಂಡು ಬರುವ ವಂಚನೆಯೇತರ ಪ್ರಕರಣಗಳು), ಉದಾಹರಣೆಗೆ ಓರ್ವ ನಿವಾಸಿಯು ಒಂದು ಕೆಲವು ದಿನಗಳಲ್ಲಿ ಆಧಾರ್ ಸಂಖ್ಯೆಯನ್ನು ಸ್ವೀಕರಿಸದಿದ್ದಲ್ಲಿ ಹಾಗೂ ಒಂದು ನೋಂದಣಿ ಕೇಂದ್ರದಲ್ಲಿ ಪುನರ್-ನೋಂದಣಿ ಮಾಡಿಸಲು ತೀರ್ಮಾನಿಸಿದ ಸಂದರ್ಭದಲ್ಲಿ. ಮಕ್ಕಳಿಗೆಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಸೆರೆಹಿಡಿಯುವುದಿಲ್ಲವಾದ್ದರಿಂದ ಹಾಗೂ ಅದನ್ನು 5 ವರ್ಷಗಳಿಗೂ ಕಡಿಮೆ ವಯಸ್ಸಿನ ಮಕ್ಕಳಿಗೆ ಸಂಬಂಧಿಸಿದಂತೆ ನಕಲಿ ಮಾಹಿತಿಯನ್ನು ಹೊರತೆಗೆಯಲು ಬಳಸಿಕೊಳ್ಳಲಾಗುವುದು ಹಾಗೂ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಸೆರೆಹಿಡಿಯದಿರುವ ನಿವಾಸಿಗಳಿಗೆ ಸಂಬಂಧಿಸಿದಂತೆ ಬಳಸಿಕೊಳ್ಳಲಾಗುವುದು. ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದಂತೆ ನಕಲಿ ಮಾಹಿತಿಯನ್ನು ಹೊರತೆಗೆಯುವಿಕೆಯ ಉದ್ದೇಶವು ಈ ಪ್ರಕರಣಗಳನ್ನು ಹೊರ ಹಾಕುವುದಾಗಿದೆ ಹಾಗೂ ಇದರಿಂದಾಗಿ ತಿರಸ್ಕರಿಸಲ್ಪಡುವ ಪ್ರಕರಣಗಳನ್ನು ಕಡಿಮೆಗೊಳಿಸುವುದಾಗಿದೆ

ಕೈಯಿಂದ ಮಾಡಲಾಗುವ ಪರೀಕ್ಷಣೆಗಳು: ನೋಂದಣಿ ಪೊಟ್ಟಣಗಳನ್ನು ಕೈಯಿಂದ ಮಾಡಲಾಗುವ ಪರೀಕ್ಷಣೆಗಳಿಗಾಗಿ ಕಳುಹಿಸಲಾಗುವುದು, ಅಲ್ಲಿ ವಿವಿಧ ಗುಣಮಟ್ಟ ಪರೀಕ್ಷಣೆಗಳನ್ನು ಮಾಡುವ ನಿರ್ವಾಹಕರುಗಳು ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯ ಹಾಗೂ ಛಾಯಾಚಿತ್ರ ಗುಣಮಟ್ಟದ ಅಂಶಗಳನ್ನು ಪರೀಕ್ಷಿಸುವರು. ಇದು ನಿವಾಸಿ ಛಾಯಾಚಿತ್ರದ ಪ್ರತಿಯಾಗಿವಿವೇಕ ಪರೀಕ್ಷಣೆಗಳು - ಮಾನವ ಪ್ರತಿಬಿಂಭದ ಉಪಸ್ಥಿತಿ, ಲಿಂಗ ಮತ್ತು ವಯಸ್ಸಿನಲ್ಲಿ ಒಟ್ಟಾರೆ ತಪ್ಪುಗಳು ಹಾಗೂ ಛಾಯಾಚಿತ್ರವು ಹೊಂದಾಣಿಕೆಯಾಗದಿರುವುದು ಹಾಗೂ ಅಲ್ಲದೇ ಸೆರೆಹಿಡಿಯಲಾತಿರುವ ಮಾಹಿತಿಯ (ಉದಾಹರಣೆಗೆ ಲಿಪ್ಯಂತರಣದಲ್ಲಿನ ತಪ್ಪುಗಳು) ಅಂಶಗಳು..

ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯಲ್ಲಿ ನಕಲನ್ನು ಹೊರತೆಗೆಯುವಿಕೆ:: ಒಂದು ಪೊಟ್ಟಣವು ಎಲ್ಲಾ ದೃಢೀಕರಣಗಳನ್ನು ಹಾಗೂ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಪರೀಕ್ಷಣೆಗಳನ್ನು ದಾಟಿದ ಕೂಡಲೇ, ಜೀವಸಂಖ್ಯಾಶಾಸ್ತ್ರ ಸಂಬಂಧಿತ ಮಾಹಿತಿಯಲ್ಲಿನ ನಕಲುಗಳನ್ನು ಹೊರತೆಗೆಯುವುದಕ್ಕಾಗಿ ಅದನ್ನು ಜೀವಸಂಖ್ಯಾಶಾಸ್ತ್ರ ಸಂಬಂಧಿತ ಉಪ-ವ್ಯವಸ್ಥೆಗೆ ಕಳುಹಿಸಲಾಗುವುದು.ಯಥಾರ್ಥತೆಹಾಗೂಕಾರ್ಯನಿರ್ವಹಣೆಯಅತ್ಯುನ್ನತಮಟ್ಟಗಳನ್ನುಖಚಿತಪಡಿಸಿಕೊಳ್ಳುವುದಕ್ಕಾಗಿಸ್ವಯಂಚಾಲಿತಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಗುರುತಿಸುವಿಕೆವ್ಯವಸ್ಥೆ (ಎಬಿಐಎಸ್) 3 ವಿವಿಧಮಾರಾಟಗಾರರಿಂದ (ವೆಂಡಾರ್ಸ್)ಬಳಸಿಕೊಳ್ಳಲಾಗುವುದು. ಮಾರಾಟಗಾರರನ್ನು ಅವುಗಳ ತಂತ್ರಾಂಶ ವ್ಯವಸ್ಥೆಗಳ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸುವುದನ್ನು ಮುಂದುವರೆಸಿಕೊಂಡು ಹೋಗುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಅವುಗಳ ಯಥಾರ್ಥತೆ ಹಾಗೂ ಕಾರ್ಯನಿರ್ವಹಣೆಯ ಆಧಾರದ ಮೇರೆಗೆ ಇನ್ಸೆಂಟಿವೈಸ್ ಮಾಡಲಾಗುವುದು.ಈಮಾರಾಟಗಾರರಿಗೆನಿವಾಸಿಗಳಅನಾಮಕಗೊಳಿಸಲಾದ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಒಂದು ಉಲ್ಲೇಖ ಸಂಖ್ಯೆಯ (ಸಿಐಡಿಆರ್ ನಲ್ಲಿ ಪಡೆಯಲಾದಂತಹ) ಜೊತೆಯಲ್ಲಿ ನಿವಾಸಿಯ ಗುರುತನ್ನು ಬಹಿರಂಗಪಡಿಸದೆಯೇ ಒದಗಿಸಲಾಗುವುದು. ಎಬಿಐಎಸ್ ವ್ಯವಸ್ಥೆಯು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯಲ್ಲಿ ಯಾವುದಾದರೂ ನಕಲುಗಳು ಯಾವುದಾದರೂ ಇದ್ದಲ್ಲಿ, ಅವನ್ನು ಕಂಡುಕೊಳ್ಳುವುದಕ್ಕಾಗಿ ತಮ್ಮ ಗ್ಯಾಲರಿಯಲ್ಲಿ ಇರುವಂತಹ ನಿವಾಸಿಗಳ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಹೋಲಿಕೆ ಮಾಡುವುದು

ಕೈಪಿಡಿಯ ತೀರ್ಮಾನ: ಎಬಿಐಎಸ್ ವ್ಯವಸ್ಥೆಗಳು ಗುರುತಿಸಲ್ಪಡುವ ಎಲ್ಲಾ ನಕಲುಗಳನ್ನು, ತೀರ್ಮಾನವನ್ನು ನೀಡಲ್ಪಡುವ ಘಟಕಗಳಿಗೆ ಕಳುಹಿಸಲಾಗುವುದು. ಈ ಘಟಕದ ಉದ್ದೇಶವೆಂದರೆ ಎಬಿಐಎಸ್ ವ್ಯವಸ್ಥೆಗಳಲ್ಲಿನ ಸಂಭಾವ್ಯ ಅಪರೂಪದ ತಪ್ಪು ಹೊಂದಾಣಿಕೆಗಳ ಕಾರಣ ಯಾವುದೇ ನಿವಾಸಿಯನ್ನೂ ತಿರಸ್ಕರಿಸಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ

ಆಧಾರ್ ನೀಡಿಕೆ

ನಿವಾಸಿಯ ವಿಶಿಷ್ಟತೆಯನ್ನು ನಿರ್ಧಾರಣೆ ಮಾಡುವುದಕ್ಕಾಗಿ ಆಧಾರ್ ಸಂಖ್ಯೆಯನ್ನು ನೀಡಲಾಗುವುದು. ನಿವಾಸಿಯ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯು ಈ ಆಧಾರ್ ಸಂಖ್ಯೆಯ ಜೊತೆ ಸಂಬಂಧವನ್ನು ಹೊಂದಿರುತ್ತದೆ ಮತ್ತು ಆದ್ದರಿಂದ ಅದನ್ನು ಗುರುತು ಹಾಗೂ ವಿಳಾಸದ ಸಾಕ್ಷಿಯಾಗಿ ಬಳಸಬಹುದು. ನಿವಾಸಿಯ ದೃಢೀಕರಣವನ್ನು ಯಶಸ್ವಿಯಾಗಿ ಕಾರ್ಯನಿರ್ವಹಿಸುವುದಕ್ಕಾಗಿ ಈ ಮಾಹಿತಿಯನ್ನು ದೃಢೀಕರಣ ವ್ಯವಸ್ಥೆಗಳಿಗೂ ಕಳುಹಿಸಲಾಗುವುದು

ಆಧಾರ್ ಪತ್ರ ವಿತರಣೆ

ಆಧಾರ್ ಅನ್ನು ತಂತ್ರಾಂಶ ಅನ್ವಯದಿಂದ ಪಡೆದನಂತರ, ಮಾಹಿತಿಯನ್ನು ಮುದ್ರಣ ಸಹಭಾಗಿಗಳ ಜೊತೆ ಹಂಚಿಕೊಳ್ಳಲಾಗುವುದು. ಮುದ್ರಣ ಸಹಭಾಗಿಗಳು ಪತ್ರವನ್ನು ಮುದ್ರಿಸಲು (ಮಾಹಿತಿಯ ಜಾಡನ್ನು ಹಿಡಿಯುವುದೂ ಸೇರಿದಂತೆ) ಹಾಗೂ ಅದನ್ನು ರವಾನೆ/ಸಾಗಣೆ ಸಹಭಾಗಿಗಳಿಗೆ ವಿತರಿಸುವಲ್ಲಿ ಜವಾಬ್ದಾರಿಯುತರಾಗಿರುತ್ತಾರೆ. ರವಾನೆ/ಸಾಗಣೆ ಸಹಭಾಗಿಗಳು (ಭಾರತೀಯ ಅಂಚೆ) ಭೌತಿಕ ಪತ್ರವನ್ನು ನಿವಾಸಿಗೆ ವಿತರಿಸುವಲ್ಲಿ ಜವಾಬ್ದಾರಿಯುತರಾಗಿರುತ್ತಾರೆ