ನೋಂದಣಿ

ನೋಂದಣಿ ಅಧಿಕಾರಿಗಳು ವೈಯಕ್ತಿಕ ವ್ಯಕ್ತಿಗಳ ನೋಂದಣಿಯ ಉದ್ದೇಶಕ್ಕಾಗಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಅನುಮತಿ ನೀಡಿರುವ ಅಥವಾ ಮಾನ್ಯತೆ ಮಾಡಿರುವ ಸಂಸ್ಥೆಯಾಗಿರುತ್ತದೆ. ಅವರುಗಳು ಒಂದು ಪರಸ್ಪರ ತಿಳಿವಳಿಕೆ ಪತ್ರದ ಮೂಲಕ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಸಹಭಾಗಿಗಳಾಗಿರುತ್ತಾರೆ ಹಾಗೂ ಅವರುಗಳಿಗೆ ವಹಿಸಲಾಗಿರುವ ಪಾತ್ರಗಳು ಹಾಗೂ ಜವಾಬ್ದಾರಿಗಳಿಗೆ ಜವಾಬ್ದಾರಿಯುತರಾಗಿರುತ್ತಾರೆ.ಅವುಗಳು, ಪ್ರಾಥಮಿಕವಾಗಿ ವಿವಿಧ ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರದ ಸಚಿವಾಲಯಗಳು, ಬ್ಯಾಂಕುಗಳು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳು, ಅವುಗಳು ನಿವಾಸಿಗಳ ನೋಂದಣಿಗಾಗಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಜೊತೆ ಪರಸ್ಪರ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿರುತ್ತವೆ.

ಯಾರು ನೋಂದಣಿ ಮಾಡಬಹುದು?

ನೋಂದಣಿಅಧಿಕಾರಿಯವರು ವಿಶಿಷ್ಟ ಗುರುತಿನ ಸಂಖ್ಯೆಗಳಿಗಾಗಿ ವೈಯಕ್ತಿಕ ವ್ಯಕ್ತಿಗಳ ನೋಂದಣಿಯ ಉದ್ದೇಶಕ್ಕಾಗಿ ಪ್ರಾಧಿಕಾರವು ಮಾನ್ಯತೆ ನೀಡಿರುವ ಒಂದು ಸಂಸ್ಥೆಯಾಗಿರುತ್ತದೆ. ನೋಂದಣಿ ಅಧಿಕಾರಿಯವರು ಪ್ರಾತಿನಿಧಿಕವಾಗಿ ರಾಜ್ಯ/ಕೇಂದ್ರಾಡಳಿತ ಪ್ರದೇಶ, ಸಾರ್ವಜನಿಕ ವಲಯದ ಉದ್ದಿಮೆಗಳು ಹಾಗೂ ಇತರೆ ಸಂಸ್ಥೆಗಳು ಹಾಗೂ ಸಂಘಟನೆಗಳಾಗಿರುತ್ತವೆ, ಅವುಗಳ ಕೆಲವು ಕಾರ್ಯಕ್ರಮಗಳು, ಕಾರ್ಯಚಟುವಟಿಕೆಗಳು ಅಥವಾ ಕಾರ್ಯಾಚರಣೆಗಳನ್ನು ಕಾರ್ಯಗತಗೊಳಿಸುವ ಸಾಮಾನ್ಯ ವೇಳೆಯಲ್ಲಿ ಅವು ನಿವಾಸಿಗಳ ಜೊತೆ ನೋಂದಣಿ ವ್ಯವಹಾರವನ್ನು ನಡೆಸುತ್ತವೆ. ಅಂತಹ ನೋಂದಣಿ ಅಧಿಕಾರಿಗಳ/ಪ್ರಾಧಿಕಾರಗಳ ಉದಾಹರಣೆಯೆಂದರೆ ಗ್ರಾಮೀಣಾಭಿವೃದ್ಧಿ ಇಲಾಖೆ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಾಗಿ) ಅಥವಾ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ (ಗುರಿಯಾಗಿಸಿಕೊಳ್ಳಲಾಗಿರುವ ಸಾರ್ವಜನಿಕ ವಿತರಣಾ ವ್ಯವಸ್ಥೆಗಾಗಿ), ಜೀವವಿಮಾ ನಿಗಮ ಮುಂತಾದ ವಿಮಾ ಕಂಪನಿಗಳು ಹಾಗೂ ಬ್ಯಾಂಕುಗಳು

ನೋಂದಣಿ ಪ್ರಾಧಿಕಾರವು/ಅಧಿಕಾರಿಯವರು ಯಾವ ರೀತಿ ಇರತಕ್ಕದ್ದು?

ಈ ಹಂತದಲ್ಲಿ, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಪ್ರಾಥಮಿಕವಾಗಿ ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು ಹಾಗೂ ಹಣಕಾಸು ಸಂಸ್ಥೆಗಳನ್ನು ತೊಡಗಿಸಿಕೊಂಡಿದೆ. ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಪ್ರತಿಯೊಂದು ನೋಂದಣಿ ಪ್ರಾಧಿಕಾರದ ಜೊತೆಗೂ ಪರಸ್ಪರ ತಿಳಿವಳಿಕೆ ಪತ್ರವನ್ನು ಮಾಡಿಕೊಂಡಿದೆ, ಅದರಲ್ಲಿ ಪಾತ್ರಗಳು ಹಾಗೂ ಜವಾಬ್ದಾರಿಗಳನ್ನು ವಿವರಿಸಲಾಗಿದೆ ಹಾಗೂ ಅವುಗಳಿಗೆ ಬದ್ಧವಾಗಿರತಕ್ಕದ್ದು. ನಿವಾಸಿಗಳ ನೋಂದಣಿಯನ್ನು ಸ್ವತ: ತಾವೇ ಮಾಡಲು ಅಥವಾ ನೋಂದಣಿ ಸಂಸ್ಥೆಗಳನ್ನು ಆಯ್ಕೆ ಮಾಡಲು ಸಹಿ ಮಾಡಲ್ಪಟ್ಟ ಪರಸ್ಪರ ತಿಳಿವಳಿಕೆ ಪತ್ರವು ಅನುವು ಮಾಡಿದೆ

ರಾಜ್ಯ ಸರ್ಕಾರ ಹಾಗೂ ರಾಜ್ಯ ಸರ್ಕಾರೇತರ ನೋಂದಣಿ ಪ್ರಾಧಿಕಾರಗಳು

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ನೋಂದಣಿ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುವ ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶ ಆಡಳಿತಗಳು ರಾಜ್ಯ ಸರ್ಕಾರಿ ನೋಂದಣಿ ಪ್ರಾಧಿಕಾರವಾಗಿರುತ್ತವೆ. ಒಂದು ಪರಸ್ಪರ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕುವ ಎಲ್ಲಾ ಬ್ಯಾಂಕುಗಳು ಹಾಗೂ ಸಾರ್ವಜನಿಕ ವಲಯದ ಉದ್ದಿಮೆಗಳು ರಾಜ್ಯ ಸರ್ಕಾರೇತರ ನೋಂದಣಿ ಪ್ರಾಧಿಕಾರವಾಗಿರುತ್ತವೆ

ನೋಂದಣಿ ಪ್ರಾಧಿಕಾರದ ಪಾತ್ರಗಳು ಹಾಗೂ ಜವಾಬ್ದಾರಿಗಳು

  • ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಜೊತೆ ಸಹಭಾಗಿಗಳು ಹಾಗೂ ನೋಂದಣಿ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸುವಲ್ಲಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ವಿವರಿಸಿರುವ ಪರಿಸರವ್ಯವಸ್ಥೆಯ ಪ್ರಭಾವವನ್ನು ಭೀರುತ್ತದೆ
  • ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಒದಗಿಸಿರುವ ತಂತ್ರಾಂಶ ಅನ್ವಯವನ್ನು ಮಾತ್ರ ಬಳಸತಕ್ಕದ್ದು, ಅದು ಪ್ರತಿಯೊಬ್ಬ ನಿವಾಸಿಯ ಜಾಡನ್ನು ಹಿಡಿಯುವ ಸಾಧ್ಯತೆಗಾಗಿ ಅಥವಾ ಇಂದಿನದಿನದನ್ನಾಗಿ ಮಾಡುವಿಕೆ, ನಿರ್ವಾಹಕರು, ಮೇಲ್ವಿಚಾರಕರು, ನೋಂದಣಿ ಸಂಸ್ಥೆ, ನೋಂದಣಿ ಅಧಿಕಾರಿಯವರು ಹಾಗೂ ಇತರೆ ಯಾವುದೇ ಮಾಹಿತಿಯ ಭಾಗವಾಗಿ ಲೆಕ್ಕಪರಿಶೋಧನಾ ಮಾಹಿತಿಯನ್ನು ಸೆರೆಹಿಡಿಯುವ ಅನುವನ್ನು ಹೊಂದಿರುತ್ತದೆ.
  • ಗಣಕಯಂತ್ರ, ಮುದ್ರಕ, ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಉಪಕರಣಗಳು ಹಾಗೂ ಇತರೆ ಉಪಕರಣಗಳು ಪ್ರಾಧಿಕಾರವು ಕಾಲಾನುಕಾಲಕ್ಕೆ ನಿರ್ದಿಷ್ಟಪಡಿಸುವ ನಿರ್ದಿಷ್ಟ-ನಿರೂಪಣೆಗಳ ಪ್ರಕಾರ ಇರತಕ್ಕದ್ದು
  • ನೋಂದಣಿಗಾಗಿ ಬಳಸಲಾದ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಉಪಕರಣಗಳು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ನಿರ್ದಿಷ್ಟಪಡಿಸಿರುವ ನಿರ್ದಿಷ್ಟ ನಿರೂಪಣೆಗಳ ಪ್ರಕಾರ ಹಾಗೂ ಅಲ್ಲದೇ ಪ್ರಾಧಿಕಾರವು ನಿರ್ದಿಷ್ಟಪಡಿಸಿರುವ ಪ್ರಕ್ರಿಯೆಗಳ ಪ್ರಕಾರ ಪ್ರಮಾಣಕಗಳನ್ನು ಪೂರೈಸತಕ್ಕದ್ದು.
  • ನಿವಾಸಿಗಳ ನೋಂದಣಿಗಾಗಿ ನೋಂದಣಿ ಸಂಸ್ಥೆಗಳನ್ನು ನೇಮಕ ಮಾಡಿಕೊಳ್ಳುವುದು, ಸಂಸ್ಥೆಗಳಿಗೆ ತರಬೇತಿಯನ್ನು ನೀಡುವುದು ಹಾಗೂ ನಿಯತವಾಗಿ ಮೇಲ್ವಿಚಾರಣೆ ಮಾಡುವುದು.
  • ತರಬೇತಿ, ಅರಿವು ಮೂಡಿಸುವುದು, ನೋಂದಣಿ, ದೃಢೀಕರಣ, ಇತ್ಯಾದಿಗಳೂ ಒಳಗೊಂಡಂತೆ ತಂತ್ರಜ್ಞಾನ, ಉಪಕರಣಗಳು ಹಾಗೂ ಸಂಸ್ಕರಣೆಗಳು/ಪ್ರಕ್ರಿಯೆಗಳು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ವಿವರಿಸಿರುವ ಪ್ರಮಾಣಕಗಳ ಅನುಸಾರ ಇರುವುದನ್ನು ಖಚಿತಪಡಿಸಿಕೊಳ್ಳುವುದು.
  • ನೋಂದಣಿ ಅಧಿಕಾರಿಗಳು/ಸಂಸ್ಥೆಗಳು ನಿವಾಸಿಗಳ ನೋಂದಣಿಯನ್ನು ಸ್ವಯಂ ತಾವೇ ನಡೆಸಿಕೊಂಡು ಹೋಗತಕ್ಕದ್ದು ಅಥವಾ ಅವರು ಗುತ್ತಿಗೆ ಆಧಾರದ ಮೇರೆಗೆ ನೇಮಕ ಮಾಡುವ ನೋಂದಣಿ ಸಂಸ್ಥೆಗಳ ಮೂಲಕ ನಡೆಸಿಕೊಂಡು ಹೋಗತಕ್ಕದ್ದು. ತಮ್ಮ ಆಯ್ಕೆ ಪಟ್ಟಿಯಲ್ಲಿರುವ ನೋಂದಣಿ ಸಂಸ್ಥೆಗಳು ಅಥವಾ ಅಂತಹ ಸಂಸ್ಥೆಗಳನ್ನು ಗುತ್ತಿಗೆಗೆ ಪಡೆಯಲು ತಮ್ಮದೇ ಆದಂತಹ ಪದ್ದತಿಯನ್ನು ಅನುಸರಿಸುವ ಇತರೆ ಯಾವುದೇ ಸಂಸ್ಥೆಗಳ ಜೊತೆ ಗುತ್ತಿಗೆ ಮಾಡಿಕೊಳ್ಳಲು ನೋಂದಣಿ ಅಧಿಕಾರಿಗಳಿಗೆ/ಸಂಸ್ಥೆಗಳಿಗೆ ಆಯ್ಕೆ ಇರುತ್ತದೆ.
  • ಎಲ್ಲಾ ನೋಂದಣಿ ಪೊಟ್ಟಣಗಳನ್ನು ಸಿಐಡಿಆರ್ ಗೆ ಭದ್ರತೆಯಿಂದ ಕೂಡಿದ ಎಫ್ ಟಿ ಪಿ ಚಾನಲ್ ಮೂಲಕವೇ ನಿರ್ದಿಷ್ಟ ಸಮಯದ ಒಳಗೆ ವರ್ಗಾವಣೆ ಮಾಡಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
  • ಸಂಗ್ರಹಿಸಲಾದ ಮಾಹಿತಿಗೆ ಸೂಕ್ತ ಭದ್ರತಾ ರಕ್ಷಣೆಯನ್ನು ಖಚಿತಪಡಿಸಿಕೊಳ್ಳತಕ್ಕದ್ದು, ಅದೇ ವೇಳೆಯಲ್ಲಿ, ಬೆಂಬಲ ದಾಖಲೆಗಳ ಸುರಕ್ಷಿತ ಪ್ರತಿಗಳನ್ನು ಉಳಿಸಿಕೊಳ್ಳತಕ್ಕದ್ದು ಹಾಗೂ ಅಗತ್ಯ ಬಿದ್ದಾಗಲೆಲ್ಲಾ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಮಾಹಿತಿಯನ್ನು ವೀಕ್ಷಿಸಲು ಅವಕಾಶವನ್ನು ಒದಗಿಸುವುದು
  • ಕಡೆಗಣಿಸಲ್ಪಟ್ಟಿರುವ ನಿವಾಸಿಗಳ ಗರಿಷ್ಥ ಮಟ್ಟದ ನೋಂದಣಿಗಾಗಿ ಸಾರ್ವಜನಿಕ ಸಂಘ ಸಂಸ್ಥೆಗಳು ಹಾಗೂಇದುವರೆಗೂ ತಲುಪಲು ಸಾಧ್ಯವಾಗಿರದ ದೂರಪ್ರದೇಶಗಳಲ್ಲಿರುವ ಗುಂಪುಗಳ ಜೊತೆ ಸಹಭಾಗಿಗಳಾಗುವುದು
  • ಬಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ವಿವರಿಸಿರುವ ರೀತಿಯಲ್ಲಿ ಕುಂದುಕೊರತೆಗಳ ನಿವಾರಣೆಗಾಗಿ, ನೋಂದಣಿ ಸಂಸ್ಥೆಗಳ ಕಾರ್ಯನಿರ್ವಹಣಾ ಮೇಲ್ವಿಚಾರಣೆ ಇತ್ಯಾದಿಗಳಿಗಾಗಿ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದು, ವಿವಾದಿತ ವಿಷಯಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ನೆರವನ್ನು ಒದಗಿಸುವುದು

ನೋಂದಣಿ ಅಧಿಕಾರಿಗಳ ಆನ್ ಬೋರ್ಡ್ ದಾಖಲೆಗಳು

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ನೋಂದಣಿ ಅಧಿಕಾರಿಗಳ ಆನ್ ಬೋರ್ಡಿಂಗ್ ಗಾಗಿ ಅತ್ಯುತ್ತಮವಾಗಿ ವಿವರಿಸಲ್ಪಟ್ಟಿರುವ ಸಂಸ್ಕರಣೆ/ಪ್ರಕ್ರಿಯೆಯನ್ನು ಹೊಂದಿದೆ ಹಾಗೂ ನೋಂದಣಿ ಪ್ರಕ್ರಿಯೆಯಲ್ಲಿ ಅವರಿಗೆ ಸಹಾಯ ಮಾಡುವ ಸಲುವಾಗಿ ನೋಂದಣಿ ಅಧಿಕಾರಿಗಳಿಗೆ ದಾಖಲೆಗಳನ್ನುಹೊಂದಿಸಲಾಗಿದೆ. ನೋಂದಣಿ ಅಧಿಕಾರಿಗಳಿಗೆ ಸಂಬಂಧಿಸಿರುವ ಎಲ್ಲಾ ದಾಖಲೆಗಳನ್ನೂ ಯಾವಾಗಲೂ ಇಂದಿನದಿನದನ್ನಾಗಿ ಮಾಡಲಾಗುವುದು ಹಾಗೂ ಉಲ್ಲೇಖಕ್ಕಾಗಿ ಜಾಲತಾಣದಲ್ಲಿ ಲಭ್ಯವಿರುತ್ತದೆ. ಆನ್ ಬೋರ್ಡೆಡ್ ನೋಂದಣಿ ಅಧಿಕಾರಿಗಳ ಅನುಮೋದಿತ ಪಟ್ಟಿಯು ಹಾಗೂ ಸಂಬಂಧಿತ ಪರಸ್ಪರ ತಿಳಿವಳಿಕೆ ಪತ್ರವು ಜಾಲತಾಣದಲ್ಲಿ ಲಭ್ಯವಿದೆ

ಆಯ್ದ ಪ್ರದೇಶದಲ್ಲಿ ನಿವಾಸಿಗಳ ನೋಂದಣಿಯನ್ನು ವ್ಯಾಪಿಸುವುದಕ್ಕಾಗಿ ಒಂದು ಕಾರ್ಯನೀತಿಯನ್ನು ವಿವರಿಸುವ ಅಗತ್ಯತೆಯನ್ನು ನೋಂದಣಿ ಅಧಿಕಾರಿಯವರು ಹೊಂದಿರುತ್ತಾರೆ, ಅದಕ್ಕಾಗಿ ನೋಂದಣಿ ಸಂಸ್ಥಯನ್ನು ಆರ್ ಎಫ್ ಕ್ಯೂ / ಆರ್ ಎಫ್ ಪಿ ಮಾದರಿಯ ಮೂಲಕ ಆಯ್ಕೆ ಮಾಡಬೇಕಾಗುತ್ತದೆ. ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಆಯ್ದ ಸಂಸ್ಥೆಗಳ ಒಂದು ಪಟ್ಟಿಯನ್ನು ಹೊಂದಿದ್ದು, ಆ ಸಂಸ್ಥೆಗಳ ತಾಂತ್ರಿಕ ಹಾಗೂ ಹಣಕಾಸು ಪಾರ್ಶ್ವಚಿತ್ರಣವನ್ನು ತಾಂತ್ರಿಕ ಸಮಿತಿಯು ಪರಿಶೀಲಿಸಿರುತ್ತದೆ ಹಾಗೂ ಅವುಗಳು ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಿದ್ಧಗೊಂಡಿರುತ್ತವೆ

ನೋಂದಣಿ ಸಂಸ್ಥೆಗಳ ಆಯ್ಕೆಗಾಗಿ ಮಾದರಿ ಆರ್ ಎಫ್ ಕ್ಯೂ ಅನ್ನು ಒಂದು ಉಲ್ಲೇಖನೀಯ ದಾಖಲೆಯನ್ನಾಗಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಅಭಿವೃದ್ಧಿಪಡಿಸಿದೆ ಹಾಗೂ ಅದು ಜಾಲತಾಣದಲ್ಲಿ ಲಭ್ಯವಿದೆ. ದಾಖಲೆಯನ್ನು ನೋಂದಣಿ ಅಧಿಕಾರಿಗಳ ಅಗತ್ಯತೆಯ ಪ್ರಕಾರ ಹಾಗೂ ನೋಂದಣಿ ಅಧಿಕಾರಿಗಳು ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಯೋಜಿಸಿರುವ ಭೌಗೋಳಿಕ ಸ್ಥಳದ ಅಗತ್ಯತೆಯ ಪ್ರಕಾರ ಬದಲಾವಣೆಗೊಳಿಸುವ ಅಗತ್ಯತೆಯನ್ನು ಹೊಂದಿರುತ್ತದೆ

ನೋಂದಣಿ ಸಂಸ್ಥೆಯನ್ನು ಈ ಕೆಳಗಿನ ಮಾನದಂಡಗಳನ್ನು ಅನುಸರಿಸಿದಂತೆ ಆಯ್ಕೆ ಮಾಡುವ ಅಗತ್ಯತೆಯನ್ನು ನೋಂದಣಿ ಅಧಿಕಾರಿಗಳು ಹೊಂದಿರುತ್ತಾರೆ:

  • ತಾಂತ್ರಿಕ ಮತ್ತು ಹಣಕಾಸು ಸಾಮರ್ಥ್ಯತೆ
  • ನೋಂದಣಿಯ ಗಾತ್ರ
  • ಪ್ರದೇಶದಲ್ಲಿನ ನೋಂದಣಿ ನಡೆವಳಿಗಳ ವೇಳಾಪಟ್ಟಿ/ಕಾರ್ಯಕ್ರಮ
  • ಮಾಹಿತಿ ಸಂಗ್ರಹಣೆಯ ಅಗತ್ಯತೆ ಹಾಗೂ
  • ನೋಂದಣಿಗೆ ಸಂಬಂಧಿತ ಮೂಲಭೂತ ಸೌಕರ್ಯದ ಅನುವು

ಒಳಗೂಡಿಸುವಿಕೆಯಲ್ಲಿ ನೋಂದಣಿ ಅಧಿಕಾರಿಗಳ ಪಾತ್ರ

ಮಹಿಳೆಯರು, ಮಕ್ಕಳು, ಹಿರಿಯ ನಾಗರೀಕರು, ವಿಕಲಾಂಗ ವ್ಯಕ್ತಿಗಳು, ನೈಪುಣ್ಯತೆ/ಅನುಭವವಿಲ್ಲದ ಹಾಗೂ ಅಸಂಘಟಿತ ಕಾರ್ಮಿಕರು ಹಾಗೂ ಬುಡಕಟ್ಟು ತಂಡಗಳು ಅಥವಾ ವಾಸಿಸಲು ಯಾವುದೇ ಶಾಶ್ವತ ಮನೆಯನ್ನು ಹೊಂದಿರದ ಇತರೆ ವ್ಯಕ್ತಿಗಳನ್ನು ಹಾಗೂ ವೈಯಕ್ತಿಕ ವ್ಯಕ್ತಿಗಳನ್ನು ನೋಂದಣಿ ಮಾಡಿಸುವ ಸಲುವಾಗಿ ನೋಂದಣಿ ಅಧಿಕಾರಿಗಳು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ

ನೋಂದಣಿ ಅಧಿಕಾರಿಗಳ ಸಾಲಿನಲ್ಲಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ನಿರ್ದಿಷ್ಟ ಪಡಿಸಿರುವ ಒಂದು ಅಥವಾ ಹೆಚ್ಚಿನ ಬೆಂಬಲಿತ ದಾಖಲೆಗಳನ್ನು ಹೊಂದಿರುವ ವೈಯಕ್ತಿಕ ವ್ಯಕ್ತಿಗಳ, ಸಮಾಜದಿಂದ ಕಡೆಗಣಿಸಲ್ಪಟ್ಟಿರುವ/ಮನನೊಂದಿರುವ ಎಲ್ಲಾ ಪ್ರವರ್ಗಗಳನ್ನೂ ಹಾಗೂ ತಮ್ಮ ಗುರುತಿನ ಸಾಕ್ಷಾಧಾರವಾಗಿ ಯಾವುದೇ ದಾಖಲೆಗಳನ್ನು ಒದಗಿಸಲು ಸಾಧ್ಯವಿಲ್ಲದ ನಿವಾಸಿಗಳ ಇನ್ನಿತರ ಪ್ರವರ್ಗಗಳನ್ನು ಒಳಗೂಡಿಸುವಿಕೆಗೆ ಅನುವು ಇರತಕ್ಕದ್ದು

ನೋಂದಣಿ ಅಧಿಕಾರಿಗಳು ಮಹಿಳೆಯರನ್ನು ಮಾತ್ರ ನೋಂದಣಿ ಮಾಡಿಸುವ ಸಂಸ್ಥೆಗಳಲ್ಲಿ ಮಹಿಳಾ ನಿರ್ವಾಹಕರನ್ನು ಹೊಂದಿರುವ ಅವಕಾಶಕಲ್ಪಿಸಿಕೊಡುವುದು.ಆಸ್ಪತ್ರೆಗಳು ಮುಂತಾದ ಸ್ಥಳಗಳಲ್ಲಿ ನವಜಾತ ಶಿಶುಗಳನ್ನು ನೋಂದಣಿ ಮಾಡಿಕೊಳ್ಳುವ ಅನುವನ್ನು ನೋಂದಣಿ ಅಧಿಕಾರಿಗಳು ಹೊಂದಿರತಕ್ಕದ್ದು

ನೋಂದಣಿ ಅಧಿಕಾರಿಗಳ ಕಾರ್ಯಚಟುವಟಿಕೆಗಳು

ನೋಂದಣಿ ಅಧಿಕಾರಿಗಳ ಕಾರ್ಯಚಟುವಟಿಕೆಗಳು

  • ನೋಂದಣಿ ಸಂಸ್ಥೆಗಳ ಆನ್ ಬೋರ್ಡಿಂಗ್
  • ತರಬೇತಿಯನ್ನು ನಡೆಸುವುದು ಹಾಗೂ ನೋಂದಣಿಯನ್ನು ಮೇಲ್ವಿಚಾರಣೆ ಮಾಡುವುದು
  • ನೋಂದಣಿ ಪೊಟ್ಟಣಗಳನ್ನು ಸಂಸ್ಕರಣೆಗಾಗಿ ಸಿಐಡಿಆರ್ ಗೆ ವರ್ಗಾವಣೆ ಮಾಡುವುದು
  • ನೊಂದಣಿ ದಾಖಲೆಗಳನ್ನು ದಾಖಲೆಗಳ ನಿರ್ವಹಣಾ ವ್ಯವಸ್ಥೆ (ಡಿಎಂಎಸ್ ) ನಮೂನೆಯಲ್ಲಿ ವಹಿಸಿಕೊಡುವುದು
  • ನೋಂದಣಿಯ ಸಮಯದಲ್ಲಿ ಸಂಗ್ರಹಿಸಲಾದಂತಹ ದಾಖಲೆಗಳ ಪರಿಶೀಲನೆ
  • ಸಭೆಗಳಿಗೆ ಹಾಜರಾಗುವುದು ಹಾಗೂ ಪ್ರಕ್ರಿಯೆಗಳನ್ನು ಇಂದಿನದಿನದನ್ನಾಗಿ ಮಾಡಿಕೊಳ್ಳುವುದು