ಆಧಾರ್ ನೋಂದಣಿ

ಆಧಾರ್ ನೋಂದಣಿ ಪ್ರಕ್ರಿಯೆಯು, ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವುದು, ನೋಂದಣಿ ಅರ್ಜಿಯನ್ನು ಭರ್ತಿ ಮಾಡುವುದು, ಜನಸಂಖ್ಯಾಶಾಸ್ತ್ರ ಹಾಗೂ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸೆರೆಹಿಡಿಸಿಕೊಳ್ಳುವುದು, ನೋಂದಣಿ ಗುರುತನ್ನು ಹೊಂದಿರುವ ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳುವ ಮೊದಲು ಗುರುತಿನ ಹಾಗೂ ವಿಳಾಸದ ಸಾಕ್ಷಾಧಾರಗಳನ್ನು ಸಲ್ಲಿಸುವುದನ್ನು ಒಳಗೊಂಡಿರುತ್ತದೆ. ಆಧಾರ್ ನೋಂದಣಿಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

  • ಆಧಾರ್ ನೋಂದಣಿಯು ಉಚಿತ – ಯಾವುದೇ ಶುಲ್ಕವನ್ನೂ ನೀಡಬೇಕಾಗಿಲ್ಲ
  • ನೀವು ಭಾರತದಲ್ಲಿ ಯಾವುದೇ ಅಧಿಕೃತ ಆಧಾರ್ ನೋಂದಣಿ ಕೇಂದ್ರಕ್ಕೆ ನಿಮ್ಮ ಗುರುತು ಹಾಗೂವಿಳಾಸದ ಸಾಕ್ಷಾಧಾರಗಳೊಂದಿಗೆ ಭೇಟಿ ನೀಡಬಹುದು.
  • ಭಾವಿಗುಪ್ರಾವು ವಿಸ್ತೃತ ಶ್ರೇಣಿಯ ಗುರುತಿನ ಸಾಕ್ಷಾಧಾರಗಳನ್ನು/ದಾಖಲೆಗಳನ್ನು ಹಾಗೂ ವಿಳಾಸದಸಾಕ್ಷಾಧಾರಗಳನ್ನು/ದಾಖಲೆಗಳನ್ನುಒಪ್ಪಿಕೊಳ್ಳುತ್ತದೆ. ದೇಶದೆಲ್ಲೆಡೆಊರ್ಜಿತಗೊಂಡಿರುವದಾಖಲೆಗಳಪಟ್ಟಿಗಾಗಿದಯವಿಟ್ಟುಇಲ್ಲಿಕ್ಲಿಕ್ಮಾಡಿರಿ. ಗುರುತುಹಾಗೂವಿಳಾಸದಸಾಮಾನ್ಯಸಾಕ್ಷಾಧಾರಗಳೆಂದರೆಚುನಾವಣಾಗುರುತಿನಚೀಟಿ, ಪಡಿತರಚೀಟಿಪಾಸ್ಪೋರ್ಟ್ಹಾಗೂಚಾಲನಾಪರವಾನಿಗೆ.
  • ಪಿಎಎನ್ ಕಾರ್ಡು ಹಾಗೂ ಸರ್ಕಾರಿ ಗುರುತಿನ ಚೀಟಿಗಳಂತಹ ಛಾಯಾಚಿತ್ರವಿರುವ ಗುರುತಿನ ಚೀಟಿಗಳನ್ನು ಗುರುತಿನ ಸಾಕ್ಷಾಧಾರವಾಗಿ ಒಪ್ಪಿಕೊಳ್ಳಲಾಗುವುದು. ವಿಳಾಸದ ಸಾಕ್ಷಾಧಾರ ದಾಖಲೆಗಳು ಕಳೆದ ಮೂರು ತಿಂಗಳುಗಳಿಂದ ಪಾವತಿಸಲ್ಪಟ್ಟಿರುವ ನೀರು-ವಿದ್ಯುತ್-ದೂರವಾಣಿ ಬಿಲ್ಲುಗಳನ್ನು ಒಳಗೊಂಡಿರುತ್ತವೆ.
  • ಒಂದು ವೇಳೆ ಮೇಲೆ ತಿಳಿಸಲಾದಂತಹ ಸಾಮಾನ್ಯ ಗುರುತಿನ ಸಾಕ್ಷಾಧಾರಗಳನ್ನು ನೀವುಹೊಂದಿರದಿದ್ದಲ್ಲಿ, ಪತ್ರಾಂಕಿತ ಅಧಿಕಾರಿಗಳು/ತಹಸೀಲ್ದಾರರು ಅವರುಗಳ ಶೀರ್ಷಿತ ಹಾಳೆಯಲ್ಲಿ ನಿಮ್ಮ ಛಾಯಚಿತ್ರದೊಂದಿಗೆ ನಿಮ್ಮ ಗುರುತಿನ ಪ್ರಮಾಣ ಪತ್ರವನ್ನು ನೀಡಿದಲ್ಲಿ, ಅದನ್ನುಒಪ್ಪಿಕೊಳ್ಳಲಾಗುವುದು. ಲೋಕಸಭಾ ಸದಸ್ಯರು ಅಥವಾ ರಾಜ್ಯ ವಿಧಾನ ಸಭಾ ಸದಸ್ಯರು /ಪತ್ರಾಂಕಿತಅಧಿಕಾರಿಗಳು/ತಹಸೀಲ್ದಾರರು ಅಥವಾ ಗ್ರಾಮ ಪಂಚಾಯತಿಯ ಮುಖ್ಯಸ್ಥರು ಅಥವಾ ಅವರಿಗೆ ಸಮನಾದ ಅಧಿಕಾರಿಗಳು (ಗ್ರಾಮೀಣ ಪ್ರದೇಶಗಳಿಗೆ) ಅವರುಗಳ ಶೀರ್ಷಿತ ಹಾಳೆಯಲ್ಲಿ ನಿಮ್ಮ ವಿಳಾಸದ ಬಗ್ಗೆ ನಿಮ್ಮ ಛಾಯಾಚಿತ್ರದೊಂದಿಗೆ ಪ್ರಮಾಣ ಪತ್ರವನ್ನು ನೀಡಿದಲ್ಲಿ, ಅದನ್ನು ವಿಳಾಸದ ಊರ್ಜಿತ ಸಾಕ್ಷಾಧಾರವನ್ನಾಗಿ ಒಪ್ಪಿಕೊಳ್ಳಲಾಗುವುದು
  • ಒಂದು ಕುಟುಂಬದಲ್ಲಿನ ಯಾರಾದರೊಬ್ಬರು ಸದಸ್ಯರು ವೈಯಕ್ತಿಕ ಊರ್ಜಿತ ದಾಖಲೆಗಳನ್ನು ಹೊಂದಿರದಿದ್ದಲ್ಲಿ, ಆತನ/ಆಕೆಯ ಹೆಸರು ಕುಟುಂಬದ ಅರ್ಹತೆಯ ಪಟ್ಟಿಯಲ್ಲಿ ಇದ್ದಲ್ಲಿ, ಅಂತಹ ನಿವಾಸಿಯು ನೋಂದಣಿಯನ್ನು ಮಾಡಿಸಿಕೊಳ್ಳಬಹುದು. ಈ ಪ್ರಕರಣದಲ್ಲಿ, ಅರ್ಹತೆಯ ದಾಖಲೆಯಲ್ಲಿನ ಕುಟುಂಬದ ಮುಖ್ಯಸ್ಥರು ಗುರುತಿನ ಸಾಕ್ಷಾಧಾರದೊಂದಿಗೆ ಹಾಗೂ ವಿಳಾಸದ ಸಾಕ್ಷಾಧಾರದೊಂದಿಗೆ ಮೊದಲು ನೋಂದಣಿಯನ್ನು ಮಾಡಿಸಿಕೊಳ್ಳುವ ಅಗತ್ಯತೆಯಿರುತ್ತದೆ. ಕುಟುಂಬದ ಮುಖ್ಯಸ್ಥರು ತದನಂತರ ಕುಟುಂಬದ ಇತರೆ ಸದಸ್ಯರನ್ನು, ಅವರುಗಳು ನೋಂದಣಿಯನ್ನು ಮಾಡಿಸಿಕೊಳ್ಳುವ ವೇಳೆಯಲ್ಲಿ ಪರಿಚಯಿಸಬಹುದು. ಬಾವಿಗುಪ್ರಾವು ಅನೇಕ ಮಾದರಿಗಳ ದಾಖಲೆಗಳನ್ನು ಸಂಬಂಧದ ಸಾಕ್ಷಾಧಾರವನ್ನಾಗಿ ಒಪ್ಪಿಕೊಳ್ಳುತ್ತದೆ. ದೇಶದೆಲ್ಲೆಡೆ ಊರ್ಜಿತವಾಗಿರುವ ದಾಖಲೆಗಳ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ.
  • ಯಾವುದೇ ದಾಖಲೆಗಳು ಲಭ್ಯವಿರದ ಸಂದರ್ಭಗಳಲ್ಲಿ, ನಿವಾಸಿಯು ನೋಂದಣಿ ಕೇಂದ್ರದಲ್ಲಿ ಲಭ್ಯವಿರುವ ಪರಿಚಯಿಸುವವರ ಸಹಾಯವನ್ನು ಪಡೆದುಕೊಳ್ಳಬಹುದು. ಪರಿಚಯಿಸುವವರುಗಳ ಬಗ್ಗೆ ನೋಂದಣಿ ಅಧಿಕಾರಿಯವರು/ಸಂಸ್ಥೆಯು ಪ್ರಕಟಿಸುತ್ತದೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ಸಂಬಂಧಿತ ನೋಂದಣಿ ಅಧಿಕಾರಿಯವರ ಕಚೇರಿಯನ್ನು ಸಂಪರ್ಕಿಸಿರಿ

ಸಂಕ್ಷಿಪ್ತವಾಗಿ ತಿಳಿಸುವುದಾದಲ್ಲಿ, ನೋಂದಣಿಗಾಗಿ ಮೂರು ಬಗೆಯ ಮಾರ್ಗಗಳಿವೆ:


ದಾಖಲೆಗಳಆಧಾರಿತ
  • ಗುರುತಿನ ಒಂದು ಊರ್ಜಿತ ಸಾಕ್ಷಾಧಾರವನ್ನು ಹಾಗೂ ವಿಳಾಸದ ಒಂದು ಸಾಕ್ಷಾಧಾರವನ್ನು ಸಲ್ಲಿಸುವುದು.
ಪರಿಚಯಗಾರರನ್ನುಆಧಾರಿತ
  • ಗುರುತಿನ ಊರ್ಜಿತ ಸಾಕ್ಷಾಧಾರ ಹಾಗೂ ವಿಳಾಸದ ಊರ್ಜಿತ ಸಾಕ್ಷಾಧಾರಗಳ ಅನುಪಸ್ಥಿತಿಯಲ್ಲಿ ಓರ್ವ ಪರಿಚಯಗಾರರ ಸೇವೆಯನ್ನು ಪಡೆಯಬಹುದು. . ಪರಿಚಯಗಾರರು,ನೋಂದಣಿ ಅಧಿಕಾರಿಯವರು ನೇಮಕ ಮಾಡುವ ಓರ್ವ ವ್ಯಕ್ತಿಯಾಗಿರುತ್ತಾರೆ ಹಾಗೂ ಅವರು ಒಂದು ಊರ್ಜಿತ ಆಧಾರ್ ಸಂಖ್ಯೆಯನ್ನು ಹೊಂದಿರತಕ್ಕದ್ದು
ಕುಟುಂಬದಮುಖ್ಯಸ್ಥರನ್ನುಆಧಾರಿತ
  • ಕುಟುಂಬದ ಮುಖ್ಯಸ್ಥರು ಸಂಬಂಧದ ಸಾಕ್ಷಾಧಾರದ ದಾಖಲೆಗಳನ್ನು ಸಾಭೀತುಪಡಿಸುವ ಮೂಲಕ ಕುಟುಂಬದ ಸದಸ್ಯರನ್ನು ಪರಿಚಯಿಸಬಹುದು.

 
  • ನೋಂದಣಿ ಕೇಂದ್ರದಲ್ಲಿ, ನೋಂದಣಿ ನಮೂನೆಯಲ್ಲಿ ದಯವಿಟ್ಟು ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿರಿ. ನಿಮ್ಮ ಛಾಯಾಚಿತ್ರ, ಬೆರಳು-ಮುದ್ರಿಕೆಗಳು ಹಾಗೂ ಕಣ್ಣುಪಾಪೆಯ ಸ್ಕ್ಯಾನನ್ನು ನೋಂದಣಿಯ ಒಂದು ಭಾಗವಾಗಿ ತೆಗೆದುಕೊಳ್ಳಲಾಗುವುದು. ನೀವು ಒದಗಿಸಿದ ವಿವರಗಳನ್ನು ನೀವು ಸಮೀಕ್ಷಿಸಬಹುದು ಹಾಗೂ ನೋಂದಣಿಯ ಸಮಯದಲ್ಲಿಯೇ ತಿದ್ದುಪಡಿಗಳನ್ನು ಮಾಡಬಹುದು. ಒಂದು ನೋಂದಣಿ ಸಂಖ್ಯೆಯ ಜೊತೆಯಲ್ಲಿ ಹಾಗೂ ನೋಂದಣಿ ಸಮಯದಲ್ಲಿ ಸೆರೆಹಿಡಿಯಲಾದಂತಹ ಇತರೆ ವಿವರಗಳ ಜೊತೆಯಲ್ಲಿ ನೀವು ಒಂದು ಸ್ವೀಕೃತಿ ಚೀಟಿಯನ್ನು ಪಡೆಯುವಿರಿ. ನೋಂದಣಿ ಮಾಹಿತಿಯಲ್ಲಿನ ಯಾವುದಾದರೂ ತಿದ್ದುಪಡಿಗಳಿದ್ದಲ್ಲಿ, ಅದನ್ನು ನೋಂದಣಿಯನ್ನು ಮಾಡಿಸಿದ 96 ಗಂಟೆಗಳ ಒಳಗೆ ಸ್ವೀಕೃತಿ ಚೀಟಿಯೊಂದಿಗೆ ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಮಾಡಬಹುದು.
Demographic Data: Name, Date of Birth/Age, Gender, Address, Mobile Number and email(Optional), Biometric Data: Photograph pf face, 10 fingerprint and 2 irises capture, For Enrolling children; In case of children below 5 years, parent/guardian's name, Aadhaar and biometrics have to be provided at the time of enrolment.
  • ನೀವು ಒಂದು ಸಲ ಮಾತ್ರ ನೋಂದಣಿ ಮಾಡಿಸುವ ಅಗತ್ಯತೆಯಿರುತ್ತದೆ, ಭಾವಿಗುಪ್ರಾವು ಸಲಹೆ ನೀಡದ ಹೊರತು ಅನೇಕ/ವಿವಿಧ ನೋಂದಣಿಗಳನ್ನು ಮಾಡಿಸಿದಲ್ಲಿ, ಅವು ತಿರಸ್ಕೃತಗೊಳ್ಳುವಲ್ಲಿ ಪರಿಣಮಿಸಬಹುದು
  • ಸಿಐಡಿಆರ್ ನಲ್ಲಿ ನಿವಾಸಿಯ ಮಾಹಿತಿ ಪೊಟ್ಟಣಗಳ ಸ್ವೀಕೃತಿಯ ನಂತರ, ಆಧಾರ್ ಗಾಗಿ ಕಾಯಬೇಕಾದ ಸಮಯವು 60-90 ದಿನಗಳವರೆಗೆ ಆಗಬಹುದು.

ನೋಂದಣಿಯನ್ನು ಎಲ್ಲಿ ಮಾಡಿಸಬೇಕು

ರಾಜ್ಯಗಳಲ್ಲಿ/ಕೇಂದ್ರಾಡಳಿತ ಪ್ರದೇಶಗಳಲ್ಲಿ ನೋಂದಣಿಗಳನ್ನು ಭಾವಿಗುಪ್ರಾ ಹಾಗೂ ಭಾರತೀಯ ಪ್ರಧಾನ ಮಹಾ ನೋಂದಣಿ ಅಧಿಕಾರಿಯವರ ಕಚೇರಿಗಳು ವ್ಯಾಪಿಸುತ್ತವೆ. ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳಲ್ಲಿ ಆಧಾರ್ ನೋಂದಣಿ ಕಾರ್ಯಚಟುವಟಿಕೆಗಳನ್ನು ರಾಷ್ಟ್ರೀಯ ಜನಸಂಖ್ಯಾ ವಹಿಯನ್ನ (ಎನ್ ಪಿ ಆರ್) ತಯಾರಿಸುವುದರ ಜೊತೆಗೇ ಭಾರತೀಯ ಪ್ರಧಾನ ಮಾಹಾ-ನೋಂದಣಿ ಅಧಿಕಾರಿಯವರು ನಡೆಸಿಕೊಂಡು ಹೋಗುತ್ತಿರುವರು. ಇತರೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಿವಾಸಿಗಳು ಒಂದು ಆಧಾರ್ ನೋಂದಣಿ ಕೇಂದ್ರ ಆಧಾರ್ ಕ್ಯಾಂಪುಗಳು ಅಥವಾ ಯಾವುದಾದರೂ ಶಾಶ್ವತ ನೋಂದಣಿ ಕೇಂದ್ರದಲ್ಲಿ ಮಾತ್ರ ನೋಂದಣಿ ಮಾಡಿಸುವ ಅಗತ್ಯತೆಯಿರುತ್ತದೆ.