ನಿವಾಸಿಯು UID ಅನ್ನು ಹೇಗೆ ಲಾಕ್ ಮಾಡಬಹುದು?

ನಿವಾಸಿಯು UIDAI ವೆಬ್‌ಸೈಟ್‌ಗೆ ಭೇಟಿ ನೀಡಬಹುದು (https://resident.uidai.gov.in/aadhaar-lockunlock), ನನ್ನ ಆಧಾರ್ ಟ್ಯಾಬ್ ಅಡಿಯಲ್ಲಿ, ಆಧಾರ್ ಲಾಕ್ ಮತ್ತು ಅನ್‌ಲಾಕ್ ಸೇವೆಗಳ ಮೇಲೆ ಕ್ಲಿಕ್ ಮಾಡಿ.

UID ಲಾಕ್ ರೇಡಿಯೋ ಬಟನ್ ಅನ್ನು ಆಯ್ಕೆ ಮಾಡಿ ಮತ್ತು ಇತ್ತೀಚಿನ ವಿವರಗಳಂತೆ UID ಸಂಖ್ಯೆ, ಪೂರ್ಣ ಹೆಸರು ಮತ್ತು ಪಿನ್ ಕೋಡ್ ಅನ್ನು ನಮೂದಿಸಿ ಮತ್ತು ಭದ್ರತಾ ಕೋಡ್ ಅನ್ನು ನಮೂದಿಸಿ. Send OTP ಮೇಲೆ ಕ್ಲಿಕ್ ಮಾಡಿ ಅಥವಾ TOTP ಆಯ್ಕೆಮಾಡಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ. ನಿಮ್ಮ UID ಯಶಸ್ವಿಯಾಗಿ ಲಾಕ್ ಆಗುತ್ತದೆ."