ನಾನು ಓರ್ವ ಅನಿವಾಸಿ ಭಾರತೀಯ ಮತ್ತು ನಾನು ಆಧಾರ್ ಅನ್ನು ಹೊಂದಿರುವುದಿಲ್ಲ. ನಾನು ಆಧಾರ್ ಅನ್ನು 30 ಏಪ್ರಿಲ್ ಒಳಗೆ ಒದಗಿಸದಿದ್ದಲ್ಲಿ ನನ್ನ ಶಾಶ್ವತ ಖಾತೆ ಸಂಖ್ಯೆಯನ್ನು (ಪಿ ಎ ಎನ್) ತಡೆಹಿಡಿಯಲಾಗುವುದು ಎಂಬುದು ಸತ್ಯವೇ?

ಹಣಕಾಸು ಅಧಿನಿಯಮ, 2017ರ ಮೂಲಕ ಜಾರಿಗೆ ತರಲಾದ ಆದಾಯ ತೆರಿಗೆ ಅಧಿನಿಯಮ 1961ರ ಪರಿಚ್ಚೇದ 139ಎಎ ಆದಾಯ ತೆರಿಗೆ ಸಲ್ಲಿಕೆಯ ಸಲ್ಲಿಕೆಗಾಗಿ ಮತ್ತು ಶಾಶ್ವತ ಖಾತೆ ಸಂಖ್ಯೆಯ (ಪಿ ಎ ಎನ್) ನೀಡಿಕೆಗಾಗಿ ಅರ್ಜಿ ಸಲ್ಲಿಸುವ ಸಲುವಾಗಿ 1 ಜುಲೈ 2017ರಿಂದ ಜಾರಿಗೆ ಬರುವಂತೆ ಆಧಾರ್/ ನೋಂದಣಿ ಗುರುತಿನ ಸಂಖ್ಯೆಯ ಕಡ್ಡಾಯ ನಮೂದಿಸುವಿಕೆಗೆ ಅನುವು ಮಾಡಿದೆ. ಆಧಾರ್ ಅನ್ನು ಪಡೆಯಲು ಅರ್ಹತೆಯಿರುವಂತಹ ಓರ್ವ ವ್ಯಕ್ತಿಗೆ ಮಾತ್ರ ಆಧಾರ್ ಅಥವಾ ನೋಂದಣಿ ಗುರುತಿನ ಸಂಖ್ಯೆಯ ಅಂತಹ ಕಡ್ಡಾಯ ನಮೂದಿಸುವಿಕೆಯು ಅನ್ವಯಗೊಳ್ಳುತ್ತದೆ ಎಂಬುದಾಗಿ ಸ್ಪಷ್ಟನೆಯನ್ನು ನೀಡಲಾಗಿದೆ. ಆಧಾರ್ (ಹಣಕಾಸು ಮತ್ತು ಇತರೆ ಸಹಾಯಧನಗಳು, ಪ್ರಯೋಜನಗಳು ಮತ್ತು ಸೇವೆಗಳು) ಅಧಿನಿಯಮ, 2016 ರ ಅನುಸಾರ, ಓರ್ವ ನಿವಾಸಿ ವೈಯಕ್ತಿಕ ವ್ಯಕ್ತಿಯು ಮಾತ್ರ ಆಧಾರ್ ಅನ್ನು ಪಡೆಯುವ ಅರ್ಹತೆಯನ್ನು ಹೊಂದಿರುತ್ತಾರೆ. ಮೇಲೆ ತಿಳಿಸಲಾದ ಅಧಿನಿಯಮದ ಅನುಸಾರ ನಿವಾಸಿ ಎಂದರೆ ನೋಂದಣಿಗಾಗಿ ಅರ್ಜಿಸಲ್ಲಿಸಿದ ದಿನಾಂಕದಿಂದ ತತ್ ಕ್ಷಣದ ಹಿಂದಿನ 12 ತಿಂಗಳುಗಳಲ್ಲಿ 182 ದಿನಗಳು ಅಥವಾ ಅದಕ್ಕೂ ಹೆಚ್ಚಿನ ಅವಧಿಯಲ್ಲಿ ಭಾರತದಲ್ಲಿ ನೆಲೆಸಿರುವ ಓರ್ವ ನಿವಾಸಿಯು ಮಾತ್ರ. ಅದರಂತೆಯೇ, ಆದಾಯ ತೆರಿಗೆ ಅಧಿನಿಯಮದ ಪರಿಚ್ಚೇದ 139 ಎಎ ಅನುಸಾರ ಆಧಾರ್ ಅನ್ನು ನಮೂದಿಸುವ ಅಗತ್ಯತೆಯು ಆಧಾರ್ ಅಧಿನಿಯಮ, 2016ರ ಪ್ರಕಾರ ನಿವಾಸಿಯಾಗಿರದ ಓರ್ವ ವೈಯಕ್ತಿಕ ವ್ಯಕ್ತಿಗೆ ಅನ್ವಯಗೊಳ್ಳುವುದಿಲ್ಲ.