ಪರಿಚಯಿಸುವವರು ಎಂದರೆ ಯಾರು?

  • ಪರಿಚಯಿಸುವವರು ಎಂದರೆ ಓರ್ವ ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಯಿಂದ ಗುರುತಿಸಲ್ಪಟ್ಟ ಮತ್ತು ಭಾವಿಗುಪ್ರಾದ ಸಿಐಡಿಆರ್ ನಲ್ಲಿ “ಪರಿಚಯಿಸುವವರು ಎಂಬುದಾಗಿ ನೋಂದಣಿ ಮಾಡಿಸಲ್ಪಟ್ಟಿರುವ ವ್ಯಕ್ತಿಯಾಗಿರುತ್ತಾರೆ (ಉದಾಹರಣೆಗೆ ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಯ ಸಿಬ್ಬಂದಿಗಳು, ಚುನಾಯಿತ ಸ್ಥಳೀಯ ಸಂಸ್ಥೆಯ ಸದಸ್ಯರು, ಸ್ಥಳೀಯ ಆಡಳಿತ ಸಂಸ್ಥೆಗಳ ಸದಸ್ಯರು, ಅಂಚೆಪೇದೆ, ಶಿಕ್ಷಕರು, ಆರೋಗ್ಯ ಕೆಲಸಗಾರರು ಮತ್ತು ಡಾಕ್ಟರುಗಳು, ಅಂಗನವಾಡಿ/ಆಶಾ ಕಾರ್ಯಕರ್ತೆಯರು/ಕಾರ್ಯಕರ್ತರು, ಸ್ಥಳೀಯ ಪತ್ರಾಂಕೇತರ ಅಧಿಕಾರಿಗಳು/ಸಿಬ್ಬಂದಿ, ಇತ್ಯಾದಿ ಪ್ರಭಾವವನ್ನು ಭೀರುವವರು).
  • ಕೆಲವು ಪ್ರಕರಣಗಳಲ್ಲಿ, ಭಾವಿಗುಪ್ರಾದ ಪ್ರಾದೇಶಿಕ ಕಚೇರಿಯು ಸ್ವತ: ತಾನೇ ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಗಳ ಅನುಕೂಲತೆಗಾಗಿ ಪರಿಚಯಿಸುವವರ ಒಂದು ಗುಂಪನ್ನು ಗುರುತಿಸುವ ಕ್ರಮವನ್ನು ತೆಗೆದುಕೊಳ್ಳಬಹುದು.
  • ಪರಿಚಯಿಸುವವರು 18 ವರ್ಷಗಳಿಗೂ ಮೇಲ್ಪಟ್ಟವರಾಗಿರತಕ್ಕದ್ದು ಮತ್ತು ಪರಿಚಯಿಸುವವರು ಅಪರಾದ ಹಿನ್ನೆಲೆಯನ್ನು ಹೊಂದಿರಕೂಡದು.
  • ಪರಿಚಯಿಸುವವರನ್ನು ಓರ್ವ ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಗೆ ಸಂಪರ್ಕಿಸಲಾಗುವುದು. ಸಂಬಂಧಿತ ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಯು ಅವರುಗಳನ್ನು ಗುರುತಿಸುವವರೆಗೂ ಹಾಗೂ ಭಾವಿಗುಪ್ರಾದ ಸಿಡಿಆರ್ ನಲ್ಲಿ “ಪರಿಚಯಿಸುವವರು” ಎಂಬುದಾಗಿ ಓರ್ವ ನಿರ್ದಿಷ್ಟ ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಗಾಗಿ ನೋಂದಣಿಯಾಗಿರುವವರೆಗೂ ಅದೇ ಪರಿಚಯಿಸುವವರ ಸೇವೆಯನ್ನು ಒಂದಕ್ಕಿಂತ ಹೆಚ್ಚಿನ ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಗಳು ಉಪಯೋಗಿಸಿಕೊಳ್ಳಬಹುದು. ಆದ್ದರಿಂದ, ಪರಿಚಯಿಸುವವರು ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಗಳ ಅಧಿಕಾರ ವ್ಯಾಪ್ತಿಯಲ್ಲಿನ ಜನತೆಯನ್ನು ಮಾತ್ರ ಪರಿಚಯಿಸಬಹುದು. ಅಲ್ಲದೆಯೇ, ಓರ್ವ ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಯು ಓರ್ವ ಪರಿಚಯಿಸುವವರ ಕಾರ್ಯಾಚರಣೆಯನ್ನು ಆಡಳಿತಾತ್ಮಕ ಸೀಮೆಗಳಿಂದ (ರಾಜ್ಯ, ಜಿಲ್ಲೆ ಮಟ್ಟ) ಇನ್ನೂ ಹೆಚ್ಚಿನ ಮಿತಿಗೆ ಒಳಪಡಿಸಬಹುದು.